ಕೊರೋನಾ ಟೈಮಲ್ಲಿ ವೀಕೆಂಡ್ ಟ್ರಕ್ಕಿಂಗ್

ಭಾನುವಾರ, 15 ನವೆಂಬರ್ 2020 (09:09 IST)
ಬೆಂಗಳೂರು: ಕೊರೋನಾ, ಲಾಕ್ ಡೌನ್ ನಿಂದಾಗಿ ತಿಂಗಳಾನುಗಟ್ಟಲೇ ಮನೆಯಲ್ಲಿ ಕೂತು ಬೋರಾಗಿದೆ. ಸದ್ಯ ಹೊರಗಡೆ ಹೋದರೆ ಸಾಕು ಎನ್ನುವವರು ಈಗ ನಿಧಾನವಾಗಿ ಟ್ರಕ್ಕಿಂಗ್ ಮಾಡುವ ಮೂಲಕ ರಿಲ್ಯಾಕ್ಸ್ ಆಗಲು ನೋಡುತ್ತಿದ್ದಾರೆ. ಹಾಗಿದ್ದರೆ ಟ್ರಕ್ಕಿಂಗ್ ಈಗ ಸೇಫಾ?


ಜನ ನಿಬಿಡ ಪ್ರದೇಶಗಳಿಗೆ ಭೇಟಿ ಕೊಡುವುದಕ್ಕಿಂತ ಹಚ್ಚ ಹಸಿರಿನ, ಜನ ವಿರಳ ಪ್ರದೇಶಗಳಿಗೆ ಭೇಟಿ ಕೊಡುವುದೇ ಈಗ ರಿಲ್ಯಾಕ್ಸಿಂಗ್ ಜತೆಗೆ ಸೇಫ್. ಆದರೆ ಈಗ ವಿಪರೀತ ಮಳೆ, ಮೋಡದ ವಾತಾವರಣವಿದ್ದು, ಬೇಗನೇ ಶೀತ ಸಂಬಂಧೀ ಸಮಸ್ಯೆ ಬರುವವರು ಎಚ್ಚರಿಕೆ ವಹಿಸುವುದು ಸೂಕ್ತ.

ಟ್ರಕ್ಕಿಂಗ್ ಆದರೂ ಹೆಚ್ಚು ಗುಂಪು ಕಟ್ಟಿಕೊಂಡು ಹೋಗಬೇಡಿ. ಹೋಗುವುದಕ್ಕೂ ಮೊದಲು ನಿಮ್ಮ ಆರೋಗ್ಯ ತಪಾಸಣೆ ಮಾಡಿಕೊಳ್ಳುವುದು ಉತ್ತಮ. ಹೊರಗಡೆ ಎಲ್ಲಿಂದಲೋ ಆಹಾರ ಕಟ್ಟಿಸಿಕೊಳ್ಳುವುದಕ್ಕಿಂತ ಆದಷ್ಟು ಟ್ರಕ್ಕಿಂಗ್ ಸಂದರ್ಭದಲ್ಲಿ ಬೇಕಾಗುವ ನೀರು, ಆಹಾರ, ಕುರುಕಲು ಎಲ್ಲವನ್ನೂ ಮನೆಯಲ್ಲೇ ತಯಾರಿಸಿ ತೆಗೆದುಕೊಂಡು ಹೋಗಿ. ಇದರಿಂದ ನೀವೂ ಸೇಫ್, ನಿಮ್ಮ ಜತೆಗಿರುವವರೂ ಸೇಫ್.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ