ಆಸ್ಟ್ರೇಲಿಯಾ ಪ್ರವಾಸದಲ್ಲಿ ಟೀಂ ಇಂಡಿಯಾಗೆ ಕ್ವಾರಂಟೈನ್ ಪಕ್ಕಾ

ಭಾನುವಾರ, 13 ಸೆಪ್ಟಂಬರ್ 2020 (09:08 IST)
ದುಬೈ: ಐಪಿಎಲ್ ಬಳಿಕ ಟೀಂ ಇಂಡಿಯಾ ಆಸ್ಟ್ರೇಲಿಯಾಗೆ ಪ್ರವಾಸ ಬೆಳೆಸಲಿದ್ದು, ಅಲ್ಲಿ ಟೆಸ್ಟ್, ಸೀಮಿತ ಓವರ್ ಗಳ ಪಂದ್ಯವಾಡಲಿದೆ.


ಆಸ್ಟ್ರೇಲಿಯಾ ಪ್ರವಾಸ ಕೈಗೊಳ್ಳಲಿರುವ ಟೀಂ ಇಂಡಿಯಾ ಕಡ್ಡಾಯವಾಗಿ ಕ್ವಾರಂಟೈನ್ ಗೊಳಗಾಗಲಿದೆ. ಅಡಿಲೇಡ್ ನಲ್ಲಿ ಟೀಂ ಇಂಡಿಯಾ ಕ್ರಿಕೆಟಿಗರು ಕ್ವಾರಂಟೈನ್ ಗೊಳಗಾಗಲಿದ್ದಾರೆ. ವಿದೇಶ ಪ್ರವಾಸಿಗರಿಗೆ ಆಸ್ಟ್ರೇಲಿಯಾ ಕಡ್ಡಾಯವಾಗಿ ಎರಡು ವಾರಗಳ ಕ್ವಾರಂಟೈನ್ ಗೊಳಪಡಿಸುತ್ತದೆ. ಹೀಗಾಗಿ ಭಾರತೀಯರೂ ಈ ನಿಬಂಧನೆಯನ್ನು ಪೂರೈಸಿ ಕ್ರಿಕೆಟ್ ಸರಣಿಗೆ ಸಜ್ಜಾಗಲಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ