ವಿಶೀಕೋಲ್ಡ್, ಕೋವ್ಯಾಕ್ಸಿನ್ ದರ ಏರಿಕೆ!
ಆಗಸ್ಟ್ನಿಂದ ಡಿಸೆಂಬರ್ವರೆಗೆ ಸೀರಂ ಇನ್ಸ್ಟಿಟ್ಯೂಟ್ 37.5 ಕೋಟಿಯಷ್ಟುಕೋವಿಶೀಲ್ಡ್ ಲಸಿಕೆಗಳನ್ನು ಮತ್ತು ಭಾರತ್ ಬಯೋಟೆಕ್ 28.5 ಕೋಟಿಯಷ್ಟುಕೋವ್ಯಾಕ್ಸಿನ್ ಲಸಿಕೆಯ ಡೋಸ್ಗಳನ್ನು ಸರ್ಕಾರಕ್ಕೆ ಪೂರೈಸಲಿವೆ. ಪರಿಷ್ಕೃತ ದರವಾದ ಕೋವಿಶೀಲ್ಡ್ನ ಪ್ರತೀ ಡೋಸ್ಗೆ 215.25 ರು. ಮತ್ತು ಕೋವ್ಯಾಕ್ಸಿನ್ನ ಪ್ರತೀ ಡೋಸ್ಗೆ 225.75 ರು.ನೊಂದಿಗೆ (10 ರು. ಜಿಎಸ್ಟಿ ಸೇರಿದಂತೆ ) ಸರ್ಕಾರ ಖರೀದಿಸಲಿದೆ.
ಈ ಮೊದಲು ಈ ಎರಡೂ ಲಸಿಕೆಗಳ ಪ್ರತೀ ಡೋಸ್ಗೆ 150 ರು. ನೀಡಿ ಖರೀದಿಸಲಾಗುತ್ತಿತ್ತು. ಆದರೆ ಜೂನ್ 21ಕ್ಕೆ ಜಾರಿಗೆ ಬಂದ ನೂತನ ಕೋವಿಡ್ ಲಸಿಕೆ ಖರೀದಿ ನಿಯಮಾವಳಿಗಳ ಪ್ರಕಾರ ಲಸಿಕೆಯ ಶೇ.75ರಷ್ಟುಉತ್ಪಾದನೆಯನ್ನು ಸರ್ಕಾರವೇ ಖರೀದಿಸಲಿದೆ. ಹೀಗಾಗಿ ದರ ಹೆಚ್ಚಳವಾಗಿದೆ