ಗಂಡನ ಬಳಿ ಒಬ್ಬ ಹೆಂಡತಿ ಏನು ಬಯಸುತ್ತಾಳೆ? ತಮಾಷೆಗಾಗಿ ಕೆಲವರು ಒಡವೆ, ವಸ್ತ್ರ ಎಂದು ಏನೇ ಹೇಳಬಹುದು. ಆದರೆ ಅದಕ್ಕಿಂತ ಹೆಚ್ಚಾಗಿ ಆಕೆ ಬಯಸುವುದು ಮುಖ್ಯವಾಗಿ ಎರಡೇ ವಿಚಾರ. ಅವುಗಳು ಏನೆಂದು ಇಲ್ಲಿದೆ ನೋಡಿ ವಿವರ.
ಭಾವನಾತ್ಮಕ ಸಂಬಂಧ ಮತ್ತು ಮುಕ್ತ ಮಾತುಕತೆ
ಆಗಾಗ ನಾನು ನಿನ್ನ ಜೊತೆಗಿದ್ದೇನೆ ಎಂಬ ಫೀಲ್ ಕೊಡುತ್ತಿರಬೇಕು. ಆಕೆ ಮಾಡುವ ಕೆಲಸಗಳಿಗೆ ಸಣ್ಣದೊಂದು ಹೊಗಳಿಕೆ, ಮೆಚ್ಚುಗೆ ಕೊಡಬೇಕು. ಬೇರೆಯವರ ಮುಂದೆ ಆಕೆಯನ್ನು ತೆಗಳುವುದು, ನಿಂದಿಸುವುದು ಮಾಡಬಾರದು. ಮನೆಯವರ ಮುಂದೆ ಆಕೆಯ ಗೌರವ ಕಾಪಾಡಬೇಕು. ತಾನು ಹೇಳುವುದನ್ನು ಕೇಳಿಸಿಕೊಳ್ಳಬೇಕು. ಒಬ್ಬ ಗೆಳೆಯನಂತೆ ಸಲಹೆ ಕೊಡಬೇಕು. ಮುಖ್ಯವಾಗಿ ಮದುವೆಗೆ ಮೊದಲು ಹೇಗಿದ್ದಳೋ ಅದೇ ಸ್ವಾತಂತ್ರ್ಯ, ಮುಕ್ತ ವಾತಾವರಣ ಬೇಕು ಎಂದು ಬಯಸುತ್ತಾಳೆ.
ಸಹಭಾಗಿತ್ವದಲ್ಲಿ ಬದ್ಧತೆ
ತನ್ನ ಗಂಡ ತನಗೆ ವಿಧೇಯನಾಗಿರಬೇಕು ಎಂದು ಹೆಣ್ಣು ಬಯಸುತ್ತಾಳೆ. ಅದೇ ರೀತಿ ತಮ್ಮಿಬ್ಬರ ಸಂಬಂಧಕ್ಕೆ ಬೆಲೆ ಕೊಡಬೇಕು. ಹೇಗಿದ್ದರೂ ನಡೆಯುತ್ತದೆ ಎನ್ನುವ ಧೋರಣೆ ಇಷ್ಟವಾಗಲ್ಲ. ಎಂತಹ ಸಂದರ್ಭವೇ ಬಂದರೂ ತಮ್ಮಿಬ್ಬರ ಸಂಬಂಧಕ್ಕೆ ಬದ್ಧರಾಗಿ ನಡೆದುಕೊಳ್ಳಬೇಕು. ಮನೆ, ಮಕ್ಕಳು ಅಂತ ಬಂದರೆ ಜವಾಬ್ಧಾರಿಗಳನ್ನು ಹಂಚಿಕೊಳ್ಳಬೇಕು. ಆಕೆಯ ಜೊತೆಗೊಂದಿಷ್ಟು ಕ್ವಾಲಿಟಿ ಸಮಯ ಕಳೆಯಬೇಕು ಎಂದು ಬಯಸುತ್ತಾಳೆ.