10 ತಿಂಗಳಲ್ಲಿ 5 ಬಾರಿ ಗರ್ಭಿಣಿಯಾದ ಮಹಿಳೆ

ಗುರುವಾರ, 2 ಜುಲೈ 2015 (16:01 IST)
ಒಬ್ಬ ಮಹಿಳೆ 10 ತಿಂಗಳಲ್ಲಿ 5 ಬಾರಿ ಗರ್ಭಿಣಿಯಾಗಿರುವುದರ ಕುರಿತೇನಾದರು ಕೇಳಿದ್ದೀರಾ? ಹೌದು, ಉತ್ತರ ಪ್ರದೇಶದ ಒಬ್ಬ ಮಹಿಳೆ ತಾನು 10 ತಿಂಗಳಲ್ಲಿ 5 ಬಾರಿ ಗರ್ಭಿಣಿಯಾಗಿದ್ದೇನೆ ಎಂದು ಹೇಳಿಕೊಂಡಿದ್ದಾಳೆ. 

ಉತ್ತರ ಪ್ರದೇಶದ ಜನನಿ ಸುರಕ್ಷಾ ಯೋಜನಾ ಫಲಾನುಭವಿಗಳ ಆಡಿಟ್ ಮೂಗಿಗೆ ಬೆರಳಿಸಿಕೊಳ್ಳುವಂತಹ ಈ ವಿಷಯವನ್ನು ಬಹಿರಂಗ ಪಡಿಸಿದೆ. ಯೋಜನೆಯ ಸೌಲಭ್ಯಗಳನ್ನು  ಮಹಿಳೆಯೊಬ್ಬಳು ನಾಲ್ಕು ತಿಂಗಳಲ್ಲಿ  ಮೂರು ಬಾರಿ ತಾನು ಗರ್ಭಿಣಿ ಎಂದು ಹೇಳಿ ವಂಚಿಸಿದ್ದಾಳೆ. 
 
ಈ ಮಹಿಳೆಯ ವಿಚಾರ ಬಿಡಿ. ಬಹರೀಚ್‌ನ ಮಹಿಳೆಯೋರ್ವರು 10 ತಿಂಗಳಲ್ಲಿ  5 ಬಾರಿ ತಾನು ಗರ್ಭಿಣಿ ಎಂದು ಹೇಳಿ ಸೌಲಭ್ಯಗಳನ್ನು ಪಡೆದುಕೊಂಡಿದ್ದಾಳೆ. ಮತ್ತೂ ವಿಚಿತ್ರ ಸಂಗತಿ ಏನೆಂದರೆ ಆಕೆಗೆ 60 ವರ್ಷ ವಯಸ್ಸು. 
 
ತನಿಖಾಧಿಕಾರಿಗಳ ಪ್ರಕಾರ ಮಹಿಳೆಯರು ಮಾಡಿರುವ ವಂಚನೆಗಿಂತ  ಪ್ರಾಥಮಿಕ ಆರೋಗ್ಯ ಕೇಂದ್ರದ  ಸಿಬ್ಬಂದಿಗಳು ಮಾಡಿರುವ ಹಣದ ವಂಚನೆ ಹೆಚ್ಚಿದೆ.
 
ಬದೌನ್‌ನ ಆಶಾ ದೇವಿ, ಯೋಜನೆಯಡಿಯಲ್ಲಿ ಬಂದ ಹಣದ ಚೆಕ್ ಪಡೆಯಲು ನಾಲ್ಕು ತಿಂಗಳಲ್ಲಿ ಮೂರು ಬಾರಿ ಬ್ಯಾಂಕ್‌ಗೆ ಬಂದಾಗ ವಂಚನೆ ಪ್ರಕರಣ ಬೆಳಕಿಗೆ ಬಂದಿದೆ. ಏನೋ ವಂಚನೆ ನಡೆಯುತ್ತಿದೆ ಎಂದು ಅನುಮಾನ ತಾಳಿದ ಬ್ಯಾಂಕ್ ಅಧಿಕಾರಿಗಳು ಆರೋಗ್ಯ ಇಲಾಖೆಗೆ ಮಾಹಿತಿ ನೀಡಿದ್ದಾರೆ.  
 
ಈ ಕುರಿತು ಪ್ರತಿಕ್ರಿಯಿಸಿರುವ ಆರೋಗ್ಯ ಇಲಾಖೆಯ ಹೆಚ್ಚುವರಿ ನಿರ್ದೇಶಕ ಡಾಕ್ಟರ್ ಸುಬೋಧ್ ಶರ್ಮಾ  ತನಿಖಾ ವರದಿ ಬರುತ್ತಿದ್ದಂತೆ ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವುದಾಗಿ  ಹೇಳಿದ್ದಾರೆ. 

ವೆಬ್ದುನಿಯಾವನ್ನು ಓದಿ