ಮೋದಿ ಗೆಲುವು: ಅಸಹನೆಯಿಂದ ಶುಕ್ರವಾರದ ಪ್ರಾರ್ಥನೆ ರದ್ದುಗೊಳಿಸಿದ ಶಾಹಿ ಇಮಾಮ್

ಶನಿವಾರ, 17 ಮೇ 2014 (16:05 IST)
ಕೇಂದ್ರದಲ್ಲಿ ಬಿಜೆಪಿ ನೇತೃತ್ವದ ಸರಕಾರ ರಚನೆಯಾಗುತ್ತಿರುವುದರಿಂದ ದೇಶದ ಮುಸ್ಲಿಮರು ಕೋಮುವಾದದ ಭೀತಿಯನ್ನು ಎದುರಿಸುತ್ತಿದ್ದಾರೆ ಎಂದು ದೆಹಲಿ ಜಾಮಾ ಮಸೀದಿಯ ಶಾಹಿ ಇಮಾಮ್ ಬುಖಾರಿ ಆತಂಕ ವ್ಯಕ್ತಪಡಿಸಿದ್ದಾರೆ.  
 
ಲೋಕಸಭೆ ಚುನಾವಣೆಯಲ್ಲಿ ಶುಕ್ರವಾರದಂದು ಬಿಜೆಪಿ ಭರ್ಜರಿ ಬಹುಮತ ಪಡೆಯುತ್ತಿದ್ದಂತೆ ದೆಹಲಿ ಜಾಮಾ ಮಸೀದಿಯ ಶಾಹಿ ಇಮಾಮ್, ಪ್ರಾರ್ಥನೆ ಮುಕ್ತಾಯದ ನಂತರ ಮಸೀದಿಗೆ ಆಗಮಿಸಿದ್ದವರೊಂದಿಗೆ ಸಂವಾದದಲ್ಲಿ ತೊಡಗುವ ಕಾರ್ಯಕ್ರಮವನ್ನು ರದ್ದುಗೊಳಿಸಿದ್ದಾರೆ.   
 
ಕಳೆದ 2002ರಲ್ಲಿ ಗುಜರಾತ್‌ನಲ್ಲಿ ನಡೆದ ದಂಗೆಯ ನಂತರ ಮೋದಿಯ ಬಗ್ಗೆ ಮುಸ್ಲಿಂ ಸಮುದಾಯದಲ್ಲಿ ಆತಂಕವಿದೆ. ಮೋದಿ ನೇತೃತ್ವದ ಸರಕಾರ ಅಲ್ಪಸಂಖ್ಯಾತರಿಗೆ ಯಾವ ರೀತಿ ನಡೆಸಿಕೊಳ್ಳಲಾಗುತ್ತದೆ ಎನ್ನುವ ಬಗ್ಗೆ ಕಾಲವೇ ಉತ್ತರ ಹೇಳಲಿದೆ.. ಹೊಸ ಸರಕಾರ ದೇಶದಲ್ಲಿ ತನ್ನ ಉದ್ದೇಶವನ್ನು ಜಾರಿಗೆ ತರಲಿದೆಯೋ ಅಥವಾ ಸಂವಿಧಾನವನ್ನು ಅನುಸರಿಸಲಿದೆಯೋ ಎನ್ನುವುದನ್ನು ಕಾದುನೋಡಬೇಕಾಗಿದೆ. ಒಂದು ವೇಳೆ ತನ್ನ ಉದ್ದೇಶವನ್ನು ಜಾರಿಗೆ ತರಲು ಬಯಸಿದಲ್ಲಿ ಅಪಾಯ ಎದುರಾಗಲಿದೆ ಎಂದರು.  
 
ಲೋಕಸಭೆ ಚುನಾವಣೆ ಫಲಿತಾಂಶ ಪ್ರಕಟವಾಗುತ್ತಿದ್ದಂತೆ ಲಕ್ನೋದಲ್ಲಿರುವ ಶಿಯಾ ಮತ್ತು ಸುನ್ನಿ ಮುಸ್ಲಿಂ ಸಮುದಾಯದ ಮಸೀದಿಗಳ ಶಾಹಿ ಇಮಾಮ್‌ಗಳು ತಮ್ಮ ಕಾರ್ಯಕ್ರಮವನ್ನು ರದ್ದುಗೊಳಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.  

ವೆಬ್ದುನಿಯಾವನ್ನು ಓದಿ