ಈಶ್ವರ ಖಂಡ್ರೆ ಬೆಂಬಲಿಗರಿಂದ ವೋಟ್ ಗೆ ನೋಟ್ ಹಂಚಿಕೆ?

ಸೋಮವಾರ, 22 ಏಪ್ರಿಲ್ 2019 (17:52 IST)
ಗಡಿ ಜಿಲ್ಲೆಯಲ್ಲಿ ಕುರುಡು ಕಾಂಚಾಣ ಸದ್ದು ಮಾಡುತ್ತಿದೆ. ಮನೆ ಮನೆಗೆ ಹೋಗಿ ಕೆಪಿಸಿಸಿ ಕಾರ್ಯಾಧ್ಯಕ್ಷರ ಬೆಂಬಲಿಗರು ಬಹಿರಂಗವಾಗಿ ಹಣ ಹಂಚುತ್ತಿರುವ ದೃಶ್ಯ ವೈರಲ್ ಆಗಿದೆ.

ನಾಳೆ ಗಡಿ ಜಿಲ್ಲೆ ಬೀದರ್ ನಲ್ಲಿ ಎರಡನೇ ಹಂತದ ಮತದಾನ ನಡೆಯಲಿದೆ. ಈ ಹಿನ್ನಲೆಯಲ್ಲಿ ಬೀದರ್ ಕುಣಿಯುತ್ತಿರುವ ಕುರಡು ಕಾಂಚಾಣ ಜನರ ಹುಬ್ಬೇರಿಸಿದೆ.

ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ ಖಂಡ್ರೆ ಬೆಂಬಲಿಗರಿಂದ ಹಣ ಹಂಚಿಕೆ ಮಾಡಲಾಗುತ್ತಿದೆ. ಈಶ್ವರ ಖಂಡ್ರೆ ಅವರ ತವರು ಕ್ಷೇತ್ರ ಭಾಲ್ಕಿಯ ಮೇಕರ್ ನಲ್ಲಿ ಹಣ ಹಂಚಿಕೆ ಮಾಡುತ್ತಿರುವ ವಿಡಿಯೋ ವೈರಲ್ ಆಗಿದೆ.

ಹಾಡ ಹಗಲೇ ಮನೆ ಮನೆ ತೆರಳಿ ಹಣ ಹಂಚುತ್ತಿರುವ ಕಾರ್ಯಕರ್ತರು, ಕಾಂಗ್ರೆಸ್ ಪರ ಮತಯಾಚನೆ ಮಾಡುತ್ತಿದ್ದಾರೆ. ಪ್ರತಿ ಓಟಿಗೆ 200 ರಿಂದ  300 ರೂಪಾಯಿ ಗರಿ ಗರಿ ನೋಟು ಹಂಚುತ್ತಿರುವ ಕೈ ಕಾರ್ಯಕರ್ತರು ಹಣ ಹಂಚೋದ್ರಲ್ಲಿ ಬ್ಯುಸಿಯಾಗಿದ್ದಾರೆ.

ಇನ್ನು ಇಷ್ಟೆಲ್ಲ ನಡೆಯುತ್ತಿದ್ದರೂ ಜಿಲ್ಲಾ ಚುನಾವಣಾ ಆಯೋಗ ಸುಮ್ಮನೆ ಕುಳಿತಿರೋದು ಏಕೆ ಎಂದು ಕೆಲವು ಜನರು ಪ್ರಶ್ನೆ ಮಾಡುತ್ತಿದ್ದಾರೆ.



ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ