ತಡರಾತ್ರಿವರೆಗೂ, ಹಲವು ಮಜಲುಗಳಲ್ಲಿ ಸಮಾಲೋಚನೆ ನಡೆಸಲಾಗಿದೆ. ಜೆಡಿಎಸ್ - ಕಾಂಗ್ರೆಸ್ ನಾಯಕರು ಸಮಾಲೋಚನೆ ನಡೆಸಿದ್ದು, ನಮಗಿಂತ ಬಿಜೆಪಿಯವರೇ ತಮ್ಮ ಅಭ್ಯರ್ಥಿ ಸೋಲಿಗೆ ಸಿದ್ಧರಾಗಿದ್ದಾರೆ. ಹೀಗಂತ ಸಚಿವರೊಬ್ಬರು ಹೇಳಿದ್ದಾರೆ.
ನಮಗಿಂತ ಹೆಚ್ಚಾಗಿ ಬಿ.ವೈ.ರಾಘವೇಂದ್ರ ನನ್ನು ಸೋಲಿಸಲು ಬಿಜೆಪಿ ಮುಖಂಡರೇ ತಯಾರಾಗಿದ್ದಾರೆ. ಅವರ ಹೆಸರು ಸಮಯ ಬಂದಾಗ ತಿಳಿಸುತ್ತೇನೆ. ನೀವು ಏನು ಮಾಡಬೇಕೋ ಅದನ್ನು ಮಾಡಿ. ಒಳೊಗೊಳಗೆ ಏನು ಮಾಡಬೇಕೋ ಅದನ್ನು ನಾವು ಮಾಡುತ್ತೇವೆ ಎಂದು ನನ್ನ ಬಳಿ ಖಾಸಗಿಯಾಗಿ ಹೇಳಿದ್ದಾರೆ. ಹೀಗಂತ ಸಚಿವ ಹೆಚ್.ಡಿ.ರೇವಣ್ಣ ಹೇಳಿದ್ದಾರೆ.
ಶಿವಮೊಗ್ಗದಲ್ಲಿ ಮಾತನಾಡಿದ ಅವರು, ರಾಜಕೀಯ ದ್ವೇಷವಿರಬಾರದು. ಯಾವ ನೈತಿಕತೆ ಇಟ್ಟುಕೊಂಡು ಮತ ಕೇಳುತ್ತಿದ್ದಾರೆ ಎಂದು ಪ್ರಶ್ನಿಸಿದರು. ಜಿಲ್ಲೆಗೆ ನೀರಾವರಿ ಯೋಜನೆಗಳನ್ನು ನೀಡದೇ ರಾಜಕೀಯ ದ್ವೇಷ ಮೆರೆದಿದ್ದಾರೆ.
ನೀರಾವರಿ ಯೋಜನೆ ಮಾಡಲು ಈಶ್ವರಪ್ಪ ತಯಾರಾಗಿದ್ದರು. ಆದರೆ, ಯಡಿಯೂರಪ್ಪ ಅದನ್ನು ಮಾಡಲು ಬಿಟ್ಟಿಲ್ಲ ಎಂದು ಟೀಕೆ ಮಾಡಿದ್ರು.
ನೀರಾವರಿ ಯೋಜನೆಗಳಿಗೆ ಚಾಲನೆ ನೀಡಿದ್ದರೆ, ಬಂಗಾರಪ್ಪರ ಹೆಸರು ಬರುತ್ತಿತ್ತು. ಹೀಗಾಗಿ ಅದನ್ನು ನಿಲ್ಲಿಸಿ, ರಾಜಕೀಯ ದ್ವೇಷ ಮೆರೆದಿದ್ದಾರೆ ಎಂದು ಆರೋಪ ಮಾಡಿದ್ರು.