ಅಮಿತ್ ಷಾ ಹವಾ; ಬಿವೈಆರ್ ರೋಡ್ ಷೋ

ಶನಿವಾರ, 20 ಏಪ್ರಿಲ್ 2019 (15:06 IST)
ಬಿಜೆಪಿ ಭದ್ರಕೋಟೆ ಎನಿಸಿಕೊಂಡಿರುವ ಶಿವಮೊಗ್ಗದಲ್ಲಿ ಅಮಿತ್ ಷಾ ಹವಾ ಜೋರಾಗಿದೆ.

ಶಿವಮೊಗ್ಗದ ಭದ್ರಾವತಿ ಪಟ್ಟಣದಲ್ಲಿ ಅಮಿತ್ ಷಾ ಹವಾ ಕೇಳಿಬರುತ್ತಿದೆ. ಬಿಜೆಪಿ ಅಭ್ಯರ್ಥಿ ಬಿ.ವೈ. ರಾಘವೇಂದ್ರ ಪರ ಅಮಿತ್ ಷಾ ರೋಡ್ ಷೋ ಆರಂಭಗೊಂಡಿದೆ.

ಭದ್ರಾವತಿ ಪಟ್ಟಣದ ರಂಗಪ್ಪ ಸರ್ಕಲ್ ನಿಂದ ಆರಂಭಗೊಂಡ ರೋಡ್ ಷೋ, ಪಟ್ಟಣದ ಮುಖ್ಯರಸ್ತೆಗಳಲ್ಲಿ ರ್ಯಾಲಿಯಾಗಿ ಸಾಗುತ್ತಿದೆ.

ರ್ಯಾಲಿಯಲ್ಲಿ ಸಾವಿರಾರು ಜನ ಬಿಜೆಪಿ ಕಾರ್ಯಕರ್ತರು, ಮುಖಂಡರು ಭಾಗಿಯಾಗಿದ್ದಾರೆ.
ಎಲ್ಲೆಲ್ಲೂ ಮೋದಿ, ಮೋದಿ, ಮೋದಿ ಘೋಷಣೆ ಮೊಳಗುತ್ತಿವೆ.

ರಸ್ತೆಗಳ ಉದ್ದಕ್ಕೂ ರಾರಾಜಿಸುತ್ತಿರುವ ಕೇಸರಿ ಬಾವುಟ, ಕೇಸರಿ ಟೋಪಿಗಳು.

ಅಮಿತ್ ಷಾ ಗೆ ಬಿಜೆಪಿ ಅಭ್ಯರ್ಥಿ ಬಿ.ವೈ. ರಾಘವೇಂದ್ರ, ಮಾಜಿ ಉಪಮುಖ್ಯಮಂತ್ರಿ ಕೆ.ಎಸ್. ಈಶ್ವರಪ್ಪ, ಶಾಸಕರಾದ ಹರತಾಳು ಹಾಲಪ್ಪ, ಅಶೋಕ್ ನಾಯ್ಕ ಸೇರಿದಂತೆ ಹಲವು ನಾಯಕರು ಸಾಥ್ ನೀಡಿದ್ದಾರೆ.



ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ