ಮೋದಿ ಹೊಗಳಿದ್ರೆ ದೇಶ ಪ್ರೇಮಿಗಳು, ತೆಗಳಿದ್ರೆ ದ್ರೋಹಿಗಳಂತೆ!
ಸೋಮವಾರ, 15 ಏಪ್ರಿಲ್ 2019 (17:33 IST)
ಭಾರತದಲ್ಲಿ ಎರಡು ತತ್ವಗಳ ನಡುವೆ ಸಂಘರ್ಷ ನಡೀತಿದೆ. ನಕಲಿ ರಾಷ್ಟ್ರವಾದಿಗಳು, ಬಹುತ್ವವಾದಿಗಳ ತತ್ವದಲ್ಲಿ ಚುನಾವಣೆ ನಡೆಯುತ್ತಿದೆ ಎಂದು ಜೆಡಿಎಸ್ ರಾಜ್ಯಾಧ್ಯಕ್ಷ ಹೇಳಿದ್ದಾರೆ.
ಕೆಆರ್ ಪೇಟೆಯಲ್ಲಿ ನಡೆದ ಸಭೆಯಲ್ಲಿ ಜೆಡಿಎಸ್ ರಾಜ್ಯಾಧ್ಯಕ್ಷ ವಿಶ್ವನಾಥ್ ಹೇಳಿಕೆ ನೀಡಿದ್ದು, ಮೋದಿಯನ್ನು ಹೊಗಳಿದ್ರೆ ದೇಶ ಪ್ರೇಮಿಗಳು, ತೆಗಳಿದ್ರೆ ದ್ರೋಹಿಗಳು ಎಂಬಂತಾಗಿದೆ ಎಂದರು.
ಬಿಜೆಪಿಯವರು ಮಂಡ್ಯದ ಬಜೆಟ್ ಅಂದ್ರು. ಇವತ್ತು ಹಿಮ್ಮೇಳದಿಂದ ಬಿಜೆಪಿ ಅಭ್ಯರ್ಥಿಯಾಗಿ ಸುಮಲತಾರನ್ನು ಬಿಟ್ಟಿದ್ದಾರೆ.
ಸುಮಲತಾ ಸ್ವತಂತ್ರ್ಯ ಅಭ್ಯರ್ಥಿ ಅಲ್ಲ. ಅವರು ಬಿಜೆಪಿ ಬೆಂಬಲಿತ ಅಭ್ಯರ್ಥಿ ಅಂತ ಟೀಕೆ ಮಾಡಿದ್ರು.
ವೈವಾಹಿಕ ಜೀವನಕ್ಕೆ ಸಂಬಂಧಿಸಿದ ತಲಾಖ್ ಕಾನೂನು ಏನು ಮಾಡಿದ್ರಿ. ತ್ರಿವಳಿ ತಲಾಖ್‌ಗೆ ಮೂರು ವರ್ಷ ಜೈಲು ಶಿಕ್ಷೆ ಮಾಡಿದ್ದೀರಿ. ನಿಮ್ಮನ್ನು ಪ್ರಶ್ನೆ ಮಾಡ್ತೀನಿ ಮೋದಿ, ನಿಮ್ಮ ಧರ್ಮ ಪತ್ನಿ ನಿಮ್ಮ ಜೊತೆಗಿಲ್ಲ. ಹಾಗಾದ್ರೆ ನಿಮಗೆ ಎಷ್ಟು ವರ್ಷ ಜೈಲಿಗೆ ಹಾಕಬೇಕು ಎಂದು ಕೇಳಿದ್ರು.
ಒಬ್ಬರಿಗೊಂದು ಕಾನೂನು ಮಾಡಲು ಜನ ತಂತ್ರದಲ್ಲಿ ಅವಕಾಶವಿಲ್ಲ ಅಂತ ವಿಶ್ವನಾಥ್ ಹೇಳಿದ್ರು.