ಎನ್ ಡಿಎ ಪರವಾಗಿ ರಿಸಲ್ಟ್ ಬಂದರೂ ಸರ್ಕಾರ ರಚಿಸಲು ತಮ್ಮದೇ ಪ್ಲ್ಯಾನ್ ಮಾಡುತ್ತಿರುವ ಚಂದ್ರಬಾಬು ನಾಯ್ಡು

ಸೋಮವಾರ, 20 ಮೇ 2019 (13:29 IST)
ನವದೆಹಲಿ: ಚುನಾವಣೋತ್ತರ ಸಮೀಕ್ಷೆಯ ವರದಿ ಪ್ರಕಾರ ಆಡಳಿತಾರೂಢ ಎನ್ ಡಿಎಗೆ ಸರಳ ಬಹುಮತ ಬರುವುದು ಖಚಿತ ಎನ್ನಲಾಗಿದೆ. ಈ ವರದಿ ಬಂದ ಬಳಿಕ ವಿಪಕ್ಷಳೇನೂ ಸುಮ್ಮನೇ ಕುಳಿತಿಲ್ಲ.


ಯುಪಿಎ ಅಂಗ ಪಕ್ಷಗಳು ಮತ್ತು ಇತರ ಸಣ್ಣ ಪುಟ್ಟ ರಾಜಕೀಯ ಪಕ್ಷಗಳು ಜತೆಯಾಗಿ ಸೇರಿಕೊಂಡು ಸರ್ಕಾರ ರೂಪಿಸಲು ಬೇಕಾಗುವ ಎಲ್ಲಾ ಪ್ರಯತ್ನಗಳನ್ನೂ ತೆಲುಗುದೇಶಂ ಪಕ್ಷದ ಮುಖ್ಯಸ್ಥ ಚಂದ್ರಬಾಬು ನಾಯ್ಡು ಮಾಡುತ್ತಿದ್ದಾರೆ.

ಇದಕ್ಕಾಗಿ ಇಂದು ಸಂಜೆ ಟಿಎಂಸಿ ನಾಯಕಿ ಮಮತಾ ಬ್ಯಾನರ್ಜಿ ಜತೆಗೂಡಿ ಕಾಂಗ್ರೆಸ್ ನಾಯಕರನ್ನು ಭೇಟಿ ಮಾಡಲು ಸಿದ್ಧತೆ ನಡೆಸಿದ್ದಾರೆ. ಒಂದು ವೇಳೆ ಎನ್ ಡಿಎ ಕೂಟಕ್ಕೆ 200 ಮೇಲೆ ಸೀಟು ಸಿಕ್ಕರೆ, ಯುಪಿಎ ಮತ್ತು ಅದರ ಮಿತ್ರ ಪಕ್ಷಗಳ ಸ್ಥಾನಗಳೆಲ್ಲಾ ಸೇರಿ 200 ರ ಸನಿಹ ಸ್ಥಾನ ಬಂದರೂ ಅಂತರ ಕಡಿಮೆಯಾಗುತ್ತದೆ.

ಹೀಗಾದಾಗ ಸರ್ಕಾರ ರಚಿಸಲು ತಾವೂ ಪ್ರಯತ್ನ ಮಾಡಬಹುದು ಎಂಬುದು ಚಂದ್ರಬಾಬು ನಾಯ್ಡು ಲೆಕ್ಕಾಚಾರ. ಹೀಗಾಗಿ ವಿಪಕ್ಷಗಳನ್ನೆಲ್ಲಾ ಒಗ್ಗೂಡಿಸುವ ಕೆಲಸದಲ್ಲಿ ತೊಡಗಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿ

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ