ಮಕ್ಕಳು ಸೇರಿದಂತೆ 17ಮಂದಿಯನ್ನು ಒತ್ತೆಯಾಳಾಗಿ ಇರಿಸಿಕೊಂಡಿದ್ದ ಆರ್ಯ ಗುಂಡೇಟಿಗೆ ಬಲಿ

Sampriya

ಗುರುವಾರ, 30 ಅಕ್ಟೋಬರ್ 2025 (18:42 IST)
Photo Credit X
ನವದೆಹಲಿ: ರೋಹಿತ್ ಆರ್ಯ ಎಂದು ಗುರುತಿಸಲಾದ ವ್ಯಕ್ತಿಯೊಬ್ಬರು ಫ್ಲಾಟ್‌ನಲ್ಲಿ 17 ಮಕ್ಕಳು, ಹಿರಿಯ ನಾಗರಿಕರು ಮತ್ತು ಒಬ್ಬ ಅಪರಿಚಿತ ವ್ಯಕ್ತಿ ಸೇರಿದಂತೆ 19 ಜನರನ್ನು ಒತ್ತೆಯಾಳಾಗಿ ಇರಿಸಿಕೊಂಡಿದ್ದ ಆರೋಪಿ ಗುಂಡೇಟಿಗೆ ಬಲಿಯಾದ ಘಟನೆ ನಡೆದಿದೆ.

ಪೊಲೀಸ್ ಕ್ರಾಸ್‌ಫೈರ್‌ನಲ್ಲಿ ಎದೆಗೆ ಗಾಯಗೊಂಡು ನಂತರ ಆರೋಪಿ ಆರ್ಯ ಸಾವನ್ನಪ್ಪಿದ್ದಾನೆ. ಇನ್ನೂ ಈ ಸಂದರ್ಭದಲ್ಲಿ ಹಿರಿಯ ನಾಗರಿಕರೂ ಗಾಯಗೊಂಡಿದ್ದಾರೆ ಮತ್ತು ವರದಿಗಳ ಪ್ರಕಾರ ಚಿಕಿತ್ಸೆಗಾಗಿ ಬಾಳಾಸಾಹೇಬ್ ಠಾಕ್ರೆ ಟ್ರಾಮಾ ಆಸ್ಪತ್ರೆಗೆ ಸಾಗಿಸಲಾಯಿತು. 

ಹಿರಿಯ ಅಧಿಕಾರಿಗಳು ಮತ್ತು ಕ್ವಿಕ್ ರೆಸ್ಪಾನ್ಸ್ ಘಟಕ ಸೇರಿದಂತೆ ಮುಂಬೈ ಪೊಲೀಸ್ ತಂಡಗಳು ಬಿಕ್ಕಟ್ಟಿನ ಬಗ್ಗೆ ಮಾಹಿತಿ ಪಡೆದ ನಂತರ ಸ್ಥಳಕ್ಕೆ ಧಾವಿಸಿವೆ. ಎಲ್ಲಾ ಮಕ್ಕಳನ್ನು ಸ್ಥಳದಿಂದ ಸುರಕ್ಷಿತವಾಗಿ ರಕ್ಷಿಸಲಾಗಿದೆ ಎಂದು ಪೊಲೀಸರು ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಗುರುವಾರ ಮುಂಬೈನ ಪೊವೈನಲ್ಲಿರುವ ಆರ್‌ಎ ಸ್ಟುಡಿಯೋಗೆ  ಆಡಿಷನ್‌ಗಾಗಿ ಮಕ್ಕಳನ್ನ ಕರೆಯಲಾಗಿತ್ತು. ಅಲ್ಲಿಂದಲೇ ಮಕ್ಕಳನ್ನ ಅಪಹರಿಸಲಾಗಿತ್ತು. ತಾನು 17 ಮಕ್ಕಳನ್ನು ಒತ್ತೆಯಾಳುಗಳಾಗಿ ಇಟ್ಟುಕೊಂಡಿರುವ ಬಗ್ಗೆ ರೋಹಿತ್‌ ಆರ್ಯ ವಿಡಿಯೋ ಸಂದೇಶವೊಂದನ್ನ ಹರಿಬಿಟ್ಟಿದ್ದ. 

ಪೋಲೀಸ್ ಇನ್ಸ್‌ಪೆಕ್ಟರ್ ಬಲವಂತವಾಗಿ ಸ್ಟುಡಿಯೊಗೆ ಪ್ರವೇಶಿಸಿದ ನಂತರ ಮತ್ತು ಆರ್ಯ ಅವರ ಬಳಿಯಿದ್ದ ಏರ್‌ಗನ್ ಮತ್ತು ಕೆಲವು ರಾಸಾಯನಿಕಗಳನ್ನು ವಶಪಡಿಸಿಕೊಂಡ ನಂತರ ಬಿಕ್ಕಟ್ಟು ಕೊನೆಗೊಂಡಿತು ಎಂದು ಪೊವೈ ಪೊಲೀಸರು ತಿಳಿಸಿದ್ದಾರೆ. 

ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್‌ ಆಗ್ತಿದ್ದಂತೆ ಎಚ್ಚೆತ್ತ ಪೊಲೀಸರು ಆತನಿರುವ ಕಟ್ಟಡ ಪತ್ತೆ ಹಚ್ಚಿ, ಮಕ್ಕಳನ್ನು ರಕ್ಷಿಸಿದ್ರು. ಈ ವೇಳೆ ಪೊಲೀಸರು ಗುಂಡು ಹಾರಿಸಿದ್ದು ಆರ್ಯನಿಗೆ ತಾಗಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ