ಬೆಂಗಳೂರು ಉತ್ತರ ಕ್ಷೇತ್ರ ಮೈತ್ರಿ ಅಭ್ಯರ್ಥಿ ಕೃಷ್ಣಬೈರೇಗೌಡ ಪರ ಪ್ರಚಾರ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಪ್ರಧಾನಿ ನರೇಂದ್ರ ಮೋದಿ ಅವರ ಕಳೆದ 5 ವರ್ಷದ ಆಡಳಿತದಲ್ಲಿ ಘೋಷಣೆ ಮಾಡದ ತುರ್ತು ಪರಿಸ್ಥಿತಿ ಜಾರಿಯಾಗಿತ್ತು. ಅವರ ವಿರುದ್ಧ ಮಾತನಾಡಿದರೆ ಕೇಂದ್ರದ ಸಂಸ್ಥೆಗಳ ಮೂಲಕ ಮಟ್ಟ ಹಾಕುತ್ತಾರೆ. ಈಗಿರುವ ಕೇಂದ್ರ ಚುನಾವಣೆ ಆಯೋಗ (ಇಸಿ) ನಗೆ ಪಾಟಲಿನ ಆಯೋಗವಾಗಿದೆ. ಈಗಿನ ಚುನಾವಣಾ ಆಯೋಗವೇ ಸರಿ ಇಲ್ಲ ಎಂದು ಆರೋಪಿಸಿದ್ದಾರೆ.
ಕೇಂದ್ರ ಸರ್ಕಾರ ಸರ್ವ ಶಿಕ್ಷಣ ಅಭಿಯಾನದ ಹಣವನ್ನು ಇವತ್ತು ನಿಲ್ಲಿಸಿದೆ. ಮನ್ ಕೀ ಬಾತ್ ಭಾಷಣದಲ್ಲಿ ಮಾತ್ರ ಭೇಟಿ ಬಚಾವ್ ಕಾರ್ಯಕ್ರಮ ಎನ್ನುತ್ತಾರೆ. ಆದರೆ ಯಾವ ಭೇಟಿ ಬಚಾವ್ ಮಾಡಿದ್ದಾರೋ ಗೊತ್ತಿಲ್ಲ. ದೇಶದ ಭದ್ರತೆ ವಿಚಾರ ಇಟ್ಟುಕೊಂಡು ಈಗ ಮತ ಕೇಳುತ್ತಿದ್ದು, 5 ವರ್ಷದ ಸಾಧನೆಯ ಬಗ್ಗೆ ಮಾತನಾಡುತ್ತಿಲ್ಲ. ದೇಶದ ಭದ್ರತೆಯನ್ನ ಒಬ್ಬರೇ ರಕ್ಷಣೆ ಮಾಡಿದಂತೆ ಹೇಳಿಕೊಂಡು ಮತ ಕೇಳುತ್ತಿದ್ದಾರೆ ಎಂದು ಪ್ರದಾನಿ ಮೋದಿ ವಿರುದ್ಧ ಸಿಎಂ ಕಿಡಿಕಾರಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್ದುನಿಯಾ ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ.