ಡಿಸಿಎಂ ಜೆಡಿಎಸ್ ಜೊತೆ ಮ್ಯಾಚ್ ಫಿಕ್ಸಿಂಗ್ ಮಾಡಿ ಗೆದ್ದಿದ್ದಾರೆ-ಸುರೇಶ್ ಗೌಡ ಆರೋಪ

ಮಂಗಳವಾರ, 2 ಏಪ್ರಿಲ್ 2019 (11:07 IST)
ತುಮಕೂರು : ವಿಧಾನಸಭಾ ಚುನಾವಣೆಯಲ್ಲಿ ಡಿಸಿಎಂ ಜಿ.ಪರಮೇಶ್ವರ್ ಸ್ವಂತ ಬಲದಿಂದ ಗೆದ್ದಿಲ್ಲ. ಜೆಡಿಎಸ್ ಜೊತೆ ಮ್ಯಾಚ್ ಫಿಕ್ಸಿಂಗ್ ಮಾಡಿ ಗೆದ್ದರು ಎಂದು ಬಿಜೆಪಿ ಮಾಜಿ ಶಾಸಕ ಸುರೇಶ್ ಗೌಡ ಆರೋಪಿಸಿದ್ದಾರೆ.


ಕೊರಟಗೆರೆ ಕ್ಷೇತ್ರದಲ್ಲಿ ಲೋಕಸಭಾ ಚುನಾವಣೆಗೆ ಬಿಜೆಪಿ ಪ್ರಚಾರದಲ್ಲಿ ತೊಡಗಿದ್ದ ಸುರೇಶ್ ಗೌಡ, ಜೆಡಿಎಸ್ ಜಿಲ್ಲಾಧ್ಯಕ್ಷ ಚೆನ್ನಿಗಪ್ಪಗೆ 5 ಕೋಟಿ ರೂ ಕೊಟ್ಟು ಸುಧಾಕರ್ ಲಾಲ್‍ ರನ್ನ ಪರಮೇಶ್ವರ್ ಸೋಲಿಸಿದರು. ಆದ್ದರಿಂದ ತಮ್ಮದೇ ಪಕ್ಷದ ಅಭ್ಯರ್ಥಿಯನ್ನು ಸೋಲಿಸಿ ಪರಮೇಶ್ವರ್ ಗೆಲುವಿಗೆ ಚೆನ್ನಿಗಪ್ಪ ಕಾರಣವಾದರು. ಬಳಿಕ ಅತ್ತ ಗ್ರಾಮಾಂತರ ಕ್ಷೇತ್ರದಲ್ಲೂ ಫಿಕ್ಸಿಂಗ್ ನಡೆದಿತ್ತು. ಜೆಡಿಎಸ್ ಅಭ್ಯರ್ಥಿ ಗೌರಿಶಂಕರ ಅವರನ್ನು ಗೆಲ್ಲಿಸಲು ಕಾಂಗ್ರೆಸ್ಸಿನಿಂದ ಡಮ್ಮಿ ಕಾಂಡಿಡೇಟ್ ಹಾಕಲಾಗಿತ್ತು. ಎಂದು ಡಿಸಿಎಂ ವಿರುದ್ಧ ಕಿಡಿಕಾರಿದ್ದಾರೆ.


ಈ ಫಿಕ್ಸಿಂಗ್ ವಿಚಾರ ದೇವೇಗೌಡರಿಗೂ ಗೊತ್ತು. ಅವರ ಪಕ್ಷದವರು ಹಣ ತೆಗೆದುಕೊಂಡಿರೋದು ಅವರಿಗೆ ಗೋತ್ತಿರಲ್ವಾ? ಸಿದ್ದರಾಮಯ್ಯ ಅವರಿಗೆ ಸಿಎಂ ಸೀಟು ತಪ್ಪಿಸಿ, ಜೆಡಿಎಸ್‍ ಗೆ ಸೀಟು ಕೊಡಿಸಲು ಈ ತಂತ್ರ ಮಾಡಿದ್ದಾರೆ. ಜೆಡಿಎಸ್ ಅವರನ್ನು ಕಾಂಗ್ರೆಸ್ ಜೊತೆ ಕಳುಹಿಸಿದ್ದಾಗ ದೇವೇಗೌಡ ಹಾಗೂ ಕುಮಾರಣ್ಣಗೆ ಗೊತ್ತಿರಲಿಲ್ವಾ? ಎಲ್ಲಾ ಮ್ಯಾಚ್ ಫಿಕ್ಸ್ ಮಾಡಿಸಿ ಜೆಡಿಎಸ್ ಅವರನ್ನ ಕಾಂಗ್ರೆಸ್‍ ಗೆ ಕಳುಹಿಸಿ ಸುಧಾಕರ್ ಲಾಲ್ ಅವರನ್ನು ಚೆನ್ನಿಗಪ್ಪ ಸೋಲಿಸಿದರು ಎಂದು ಅವರು ಆರೋಪ ಮಾಡಿದ್ದಾರೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ.


 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ