ಅಲ್ಲಿ ಚುನಾವಣೆ; ಇಲ್ಲಿ ಜೀವಕ್ಕಾಗಿ ಬವಣೆ

ಸೋಮವಾರ, 1 ಏಪ್ರಿಲ್ 2019 (17:08 IST)
ಎಲೆಕ್ಷನ್ ಕಾವು ಎಲ್ಲೆಡೆ ಜೋರಾಗಿದ್ದರೆ, ಇನ್ನೊಂದೆಡೆ ಜೀವಜಲಕ್ಕಾಗಿ ಜನರು ಇನ್ನಿಲ್ಲದಂತೆ ಪರಿತಪಿಸುತ್ತಿದ್ದಾರೆ.

ಬೇಸಿಗೆ ಶುರುವಾಗುತ್ತಲೇ ಕುಡಿಯುವ ನೀರಿಗಾಗಿ ಹಾಹಾಕಾರ ಉಂಟಾಗಿದೆ. ದಾವಣಗೆರೆ ಜಿಲ್ಲೆಯ ಜಗಳೂರು ಪಟ್ಟಣದ ಬಹುತೇಕ ಬಡಾವಣೆಗಳಲ್ಲಿ ನೀರಿನ ಸಮಸ್ಯೆ ಉಂಟಾಗಿದೆ. ಬರಪೀಡಿತ ತಾಲ್ಲೂಕು ಎಂದು ಘೋಷಣೆಯಾಗಿರುವ ಜಗಳೂರು ತಾಲ್ಲೂಕಿನಲ್ಲಿ ಕುಡಿಯುವ ನೀರಿಗೂ ಪರದಾಡುವ ಪರಿಸ್ಥಿತಿ ಎದುರಾಗಿದೆ.

ದಿನಗಟ್ಟಲೇ ನಿಂತರೂ ಒಂದು ಕೊಡ ನೀರು ಸಿಗದ ಪರಿಸ್ಥಿತಿ ತಲೆದೋರಿದೆ. ಇಷ್ಟಿದ್ದರೂ  ಜನ‌ಪ್ರತಿನಿಧಿಗಳು  ಗಮನಹರಿಸಿಲ್ಲ. ಇದರಿಂದ ಜನರು ಜನಪ್ರತಿನಿಧಿಗಳ ಮೇಲೆ ಹಿಡಿಶಾಪ ಹಾಕುತ್ತಿದ್ದಾರೆ.

ದಿನಕ್ಕೆ ಕೇವಲ ಒಂದು ಟ್ಯಾಂಕರ್ ಮೂಲಕ ನೀರು ಪೂರೈಕೆ‌ಯಾಗುತ್ತಿದೆ. ನೀರಿಗಾಗಿ ಜನರ ಹೋರಾಟ ನಡೆಸಿದ್ದು, ಅಗತ್ಯಕ್ಕೆ ಅನುಗುಣವಾಗಿ ನೀರು ಪೂರೈಕೆಗೆ ಆಗ್ರಹಪಡಿಸಿದ್ದಾರೆ.



 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ