ರಾಜಧಾನಿಯ ಅಭ್ಯುದಯಕ್ಕೆ ಇವರನ್ನು ಗೆಲ್ಲಿಸಬೇಕಂತೆ!

ಶುಕ್ರವಾರ, 12 ಏಪ್ರಿಲ್ 2019 (12:31 IST)
ಭಾರತದ ಅಭ್ಯುದಯಕ್ಕೆ ಯುವಕರನ್ನು ಸಂಸತ್ತಿಗೆ ಆಯ್ಕೆ ಮಾಡಬೇಕಾಗಿದೆ. ಈ ಪ್ರಯೋಗ ರಾಜಧಾನಿಯಿಂದಲೇ ಆರಂಭವಾಗಿದೆಯಂತೆ.

ಬೆಂಗಳೂರು ದಕ್ಷಿಣ ಕ್ಷೇತ್ರದ ಅಭ್ಯರ್ಥಿ ಅನಂತ್ ಕುಮಾರ್ ರವರ ಗರಡಿಯಲ್ಲಿ ಪಳಗಿರುವ ತೇಜಸ್ವಿ ಸೂರ್ಯ ಪ್ರತಿಭಾವಂತ ಯುವಕನಾಗಿದ್ದು ಬೆಂಗಳೂರಿನ ಅಭಿವೃದ್ಧಿಗೆ ಈತನ ಪ್ರಾತಿನಿಧ್ಯ ಅತ್ಯಗತ್ಯವೆಂದು ಮಾಜಿ ಸಚಿವ ವಿ.ಸೋಮಣ್ಣ ಹೇಳಿದ್ದಾರೆ.
ಕ್ಷೇತ್ರದಲ್ಲಿ ಮೋದಿಯವರ ಅಲೆ ಎದ್ದಿರುವುದರಿಂದ ಈಗಾಗಲೇ ಜಯದ ವಾತಾವರಣವಿದೆ.

ಜಯದ ಸಾಂಕೇತಿಕವಾಗಿ ಯಾತ್ರೆಯನ್ನು ಕೈಕೊಂಡಿದ್ದೇವೆ ಎಂದರು. ವಿಜಯನಗರ ಮತ್ತು ಗೋವಿಂದರಾಜ ನಗರ ಕ್ಷೇತ್ರಗಳು ತನ್ನ ಎರಡು ಕಣ್ಣುಗಳೆಂದು ಬಣ್ಣಿಸಿದ ಅವರು, ನಾಳೆ ಬೆಂಗಳೂರಿಗೆ ಪ್ರಧಾನಿ ನರೇಂದ್ರ ಮೋದಿಯವರು ಆಗಮಿಸುತ್ತಿದ್ದು, ನಮಗೆ ಮೋದಿಯವರೇ ಐಕಾನ್ ಎಂದರು.

ಪ್ರತಿಸ್ಪರ್ಧಿ ಬಿ.ಕೆ. ಹರಿಪ್ರಸಾದ್ ಅನುಭವಿ ರಾಜಕಾರಣಿಯಾಗಿದ್ದು ರಾಜ್ಯಸಭೆಗೆ ಆಯ್ಕೆಯಾಗಲು ಅವರಿಗೆ ಸಾಕಷ್ಟು ಅವಕಾಶಗಳು ಇರುತ್ತವೆ ಎಂದರು. ದೇಶದ ಅಭ್ಯುದಯಕ್ಕೆ ನರೇಂದ್ರ ಮೋದಿಯವರ ನಾಯಕತ್ವ ಮತ್ತೊಮ್ಮೆ ಕೇಂದ್ರದಲ್ಲಿ ಸ್ಥಾಪನೆಯಾಗಲಿದೆ ಎಂದರು.


ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ