ನಾನು ಸೈನಿಕರಿಗೆ ಅಪಮಾನ ಮಾಡಿಲ್ಲ- ಸಿಎಂ ಕುಮಾರಸ್ವಾಮಿ

ಶನಿವಾರ, 13 ಏಪ್ರಿಲ್ 2019 (12:19 IST)
ಬೆಂಗಳೂರು : ಈ ಹಿಂದೆ ಸೈನಿಕರ ಬಗ್ಗೆ ಕೀಳಾಗಿ ಮಾತನಾಡಿದ ಸಿಎಂ ಕುಮಾರಸ್ವಾಮಿ ಅವರು ಇದೀಗ ನಾನು ಸೈನಿಕರಿಗೆ ಅಪಮಾನ ಮಾಡಿಲ್ಲ ಎಂದು ಹೇಳಿದ್ದಾರೆ.


ಚುನಾವಣಾ ಪ್ರಚಾರದ ವೇಳೆ ಮಾತನಾಡಿದ ಸಿಎಂ ಕುಮಾರಸ್ವಾಮಿ, ಮೋದಿಯವರು ಸೈನಿಕರನ್ನು ಮುಂದಿಟ್ಟುಕೊಂಡು ರಾಜಕೀಯ ಮಾಡುತ್ತಿದ್ದಾರೆ. ಗಡಿಯನ್ನು ಕಾಯುತ್ತಿರುವವರು ಯಾವ ಶ್ರೀಮಂತರ ಮಕ್ಕಳಲ್ಲ. ಕೆಲವೊಬ್ಬರಿಗೆ ಊಟಕ್ಕೆ ಗತಿಯಿಲ್ಲ, ಅಂತ ಹೇಳಿ ಸೇನೆಗೆ ಸೇರುತ್ತಿದ್ದಾರೆ ಎಂದು ಹೇಳಿದ್ದರು.


ಈ ಹೇಳಿಕೆಯ ಬಗ್ಗೆ ಬಾರೀ ವಿರೋಧ ವ್ಯಕ್ತವಾದ ಹಿನ್ನಲೆಯಲ್ಲಿ ಇದೀಗ ಸಿಎಂ ಈ ಬಗ್ಗೆ ಪ್ರತಿಕ್ರಿಯೆ ನೀಡಿದ್ದು, ದೇಶದಲ್ಲಿ ಉದ್ಯೋಗ ಸೃಷ್ಟಿಯಾಗದೇ ಸೈನ್ಯಕ್ಕೆ ಸೇರಿ ಜೀವನ ನಡೆಸುವ ಬಡ ಮಕ್ಕಳು ಇದ್ದಾರೆ ಅಂದಿದ್ದೆ. ನಾನು ಸೈನಿಕರ ಬಗ್ಗೆ ಹೇಳಿದ್ದರಲ್ಲಿ ತಪ್ಪೇನಿದೆ? ಸೈನಿಕರ ಕುಟುಂಬದ ಬಡತನ ನೋಡಿ ನಾನು ಹಾಗೇ ಹೇಳಿದ್ದೇನೆ ಎಂದು ಸ್ಪಷ್ಟನೆ ನೀಡಿದ್ದಾರೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ