ನಾಮಪತ್ರ ಸಲ್ಲಿಸಿದ ಬೆನ್ನಲ್ಲೇ ದೇವೇಗೌಡರನ್ನ ಭೇಟಿಯಾದ ಎನ್‌ಡಿಎ ಉಪ ರಾಷ್ಟ್ರಪತಿ ಅಭ್ಯರ್ಥಿ

Sampriya

ಬುಧವಾರ, 20 ಆಗಸ್ಟ್ 2025 (18:19 IST)
Photo Credit X
ನವದೆಹಲಿ: ಎನ್‌ಡಿಎ ಉಪ ರಾಷ್ಟ್ರಪತಿ ಅಭ್ಯರ್ಥಿಯಾಗಿರುವ ಸಿಪಿ ರಾಧಾಕೃಷ್ಣನ್‌ಗೆ ಮೈತ್ರಿ ಪಕ್ಷ ಜೆಡಿಎಸ್ ಬೆಂಬಲ ಘೋಷಿಸಿದ ಬೆನ್ನಲ್ಲೇ ದೇವೇಗೌಡ ಅವರನ್ನು ಭೇಟಿಯಾಗಿ ಮಾತುಕತೆ ನಡೆಸಿದರು. 

ದೆಹಲಿಯ ದೇವೇಗೌಡರ  ನಿವಾಸದಲ್ಲಿ ಉಪ ರಾಷ್ಟ್ರಪತಿ ಅಭ್ಯರ್ಥಿ ಸಿಪಿ ರಾಧಾಕೃಷ್ಣನ್ ದೇವೇಗೌಡರನ್ನ ಭೇಟಿಯಾಗಿ ಚರ್ಚೆ ನಡೆಸಿದರು.

ಭೇಟಿ ವೇಳೆ ಕೇಂದ್ರ ಸಚಿವರಾದ ಪ್ರಹ್ಲಾದ ಜೋಶಿ, ಕುಮಾರಸ್ವಾಮಿ, ಸಂಸದ ಡಾ.ಮಂಜುನಾಥ್ ಇದ್ದರು. 

ಈ ವೇಳೆ ಮಾತನಾಡಿದ ದೇವೇಗೌಡ ಅವರು, ನನ್ನ 10 ವರ್ಷದ ಅನುಭವದಲ್ಲಿ ಮೋದಿ ಅವರ ಮನಸ್ಸನ್ನು ಯಾರು ಪತ್ತೆ ಹಚ್ಚಲು ಸಾಧ್ಯವಿಲ್ಲ. ಕೊನೆಯ ಘಳಿಗೆಯ ತನಕ ಗುಟ್ಟು ಬಿಟ್ಟು ಕೊಡುವುದಿಲ್ಲ. ರಾಧಾಕೃಷ್ಣನ್ ಅವರು ಅಂತಿಮವಾಗಿ ಆಯ್ಕೆಯಾದರು. ಎಲ್ಲ ಆಯಾಮದಲ್ಲೂ ಯೋಗ್ಯವಾಗಿರುವ ಅಭ್ಯರ್ಥಿಯನ್ನು ಆಯ್ಕೆ ಮಾಡಲಾಗಿದೆ ಎಂದರು. 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ