ಮೋದಿ ಸರ್ವಾಧಿಕಾರಿನಾ? ಎಂದು ರಮ್ಯಾ ಜೇಟ್ಲಿಯನ್ನು ಪ್ರಶ್ನಿಸಿದ್ದೇಕೆ?

ಬುಧವಾರ, 15 ಮೇ 2019 (11:00 IST)
ನವದೆಹಲಿ : ಮಮತಾ ಬ್ಯಾನರ್ಜಿ ಪೋಟೋ ತಿರುಚಿದ ವಿವಾದದ ಕುರಿತು ಕೇಂದ್ರ ಸಚಿವ ಅರುಣ್ ಜೇಟ್ಲಿ ನೀಡಿದ ಪ್ರತಿಕ್ರಿಯೆಗೆ ಇದೀಗ ಕಾಂಗ್ರೆಸ್ ಮುಖಂಡೆ ರಮ್ಯಾ ತಿರುಗೇಟು ನೀಡಿದ್ದಾರೆ.




ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿಯವರ ಚಿತ್ರವನ್ನು ಬಾಲಿವುಡ್ ನಟಿ ಪ್ರಿಯಾಂಕ ಚೋಪ್ರಾ ಫೋಟೊದ ಜೊತೆ ಎಡಿಟ್ ಮಾಡಿ ಜೈಲು ಸೇರಿದ ಬಿಜೆಪಿ ಕಾರ್ಯಕರ್ತೆ ಪ್ರಿಯಾಂಕಾ ಶರ್ಮಾ ಅವರಿಗೆ ಸುಪ್ರೀಂ ಕೋರ್ಟ್ ಷರತ್ತುಬದ್ಧ ಜಾಮೀನು ನೀಡಿತ್ತು. ಈಬಗ್ಗೆ ಟ್ವೀಟ್ ಮೂಲಕ  ಪ್ರತಿಕ್ರಿಯಿಸಿದ್ದ ಅರುಣ್ ಜೇಟ್ಲಿ ಅವರು, ಹಾಸ್ಯ, ಬುದ್ಧಿ, ಚುಚ್ಚುಮಾತು ಮುಕ್ತ ಸಮಾಜದಲ್ಲಿ ಉಳಿದುಕೊಂಡಿವೆ. ಅವುಗಳಿಗೆ ನಿರಂಕುಶಾಧಿಕಾರ ಇರುವಲ್ಲಿ ಯಾವುದೇ ಸ್ಥಾನವಿಲ್ಲ. ಸರ್ವಾಧಿಕಾರಿಗಳಿಗೆ ನಗುವುದು ಇಷ್ಟವಿರುವುದಿಲ್ಲ, ಬಂಗಾಳದಲ್ಲಿ ಈ ಪ್ರಕರಣವಾಗಿದೆ ಎಂದಿದ್ದಾರೆ.


ಇದಕ್ಕೆ ಪ್ರತಿಕ್ರಿಯಿಸಿದ ರಮ್ಯಾ, ಜೇಟ್ಲಿ ನಿಮ್ಮ ಮಾತನ್ನು ಒಪ್ಪಿಕೊಳ್ಳುತ್ತೇನೆ. ಆದರೆ, ಇದೇ ರೀತಿಯಲ್ಲಿ ಮೋದಿ ಪೋಟೋ ತಿರುಚಿದ ಆರೋಪ ಎದುರಿಸುತ್ತಿರುವ ನಾನು ಹೇಗೆ ಹೊರಬರಬೇಕು? ಮೋದಿ ಸರ್ವಾಧಿಕಾರಿ ಅಂತಾ ನೀವು ಹೇಳುತ್ತೀರಾ ಎಂದು ಪ್ರಶ್ನಿಸಿದ್ದಾರೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ.


 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ