ಪ್ರಿಯಾಂಕ ಚೋಪ್ರಾ ಫೋಟೋಗೆ ಮಮತಾ ಬ್ಯಾನರ್ಜಿ ಮುಖ ಹಾಕಿದ್ದ ಬಿಜೆಪಿ ನಾಯಕಿ ಅರೆಸ್ಟ್

ಭಾನುವಾರ, 12 ಮೇ 2019 (12:36 IST)
ಕೋಲ್ಕತ್ತಾ: ಬಾಲಿವುಡ್ ನಟಿ ಪ್ರಿಯಾಂಕ ಚೋಪ್ರ ಅವರ  ಫೋಟೋಗೆ ಪಶ್ಚಿಮ ಬಂಗಾಳದ ಸಿಎಂ ಮಮತಾ ಬ್ಯಾನರ್ಜಿ ಮುಖವನ್ನು ಹಾಕಿದ್ದ ಬಿಜೆಪಿ ನಾಯಕಿಯ ವಿರುದ್ಧ ದೂರು ದಾಖಲಾಗಿದೆ.




ಮೆಟ್ ಗಾಲಾದಲ್ಲಿ ಬಾಲಿವುಡ್ ನಟಿ ಪ್ರಿಯಾಂಕ ಚೋಪ್ರ ಅವರ ಫೋಟೊ ಸಖತ್ ವೈರಲ್ ಆಗಿತ್ತು. ಆದರೆ ಬಿಜೆಪಿ ಯುವ ಮೋರ್ಚಾದ ನಾಯಕಿ ಪ್ರಿಯಾಂಕ ಶರ್ಮ ಪ್ರಿಯಾಂಕಾ ಚೋಪ್ರಾ ಫೋಟೊವನ್ನು ತಿರುಚಿ ಮಮತಾ ಬ್ಯಾನರ್ಜಿಯ ಮುಖವನ್ನು ಅದಕ್ಕೆ ಅಂಟಿಸಿ ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದಾರೆ.


ಈ ಕುರಿತು ದಾಸ್ ನಗರ್ ಪೊಲೀಸ್ ಠಾಣೆಯಲ್ಲಿ ಬಿಜೆಪಿ ನಾಯಕಿ ಪ್ರಿಯಾಂಕ ಶರ್ಮ ವಿರುದ್ಧ ಕೇಸ್ ದಾಖಲಾಗಿದ್ದು, ಇದೀಗ ಅವರನ್ನು ಪೊಲೀಸರು ಬಂಧಿಸಿದ್ದಾರೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ