ರಫೇಲ್ ಡೀಲ್ ಬಗ್ಗೆ ಆರೋಪ ಮಾಡಿದ ರಾಹುಲ್ ಗಾಂಧಿಗೆ ರಿಲಯನ್ಸ್ ಗ್ರೂಪ್ ತಿರುಗೇಟು

ಸೋಮವಾರ, 6 ಮೇ 2019 (11:01 IST)
ಮುಂಬೈ : ರಫೇಲ್ ವಿಮಾನ ಖರೀದಿ ವಿಚಾರದಲ್ಲಿ ಅನಿಲ್ ಅಂಬಾನಿಯ ಮೇಲೆ ಆರೋಪ ಮಾಡಿದ ರಾಹುಲ್ ಗಾಂಧಿಗೆ ರಿಲಯನ್ಸ್ ಗ್ರೂಪ್ ತಿರುಗೇಟು ನೀಡಿದೆ.




ರಫೇಲ್ ವಿಮಾನ ಖರೀದಿ ವಿಚಾರದಲ್ಲಿ ಪ್ರಧಾನಿ ಮೋದಿ ಅನಿಲ್ ಅಂಬಾನಿಗೆ 30 ಸಾವಿರ ಕೋಟಿ ರೂ. ನೀಡಿದ್ದಾರೆ ಎಂದು ರಾಹುಲ್ ಗಾಂಧಿ ಆರೋಪ ಮಾಡಿದ್ದು, ಈ ಬಗ್ಗೆ ಹೇಳಿಕೆ ನೀಡಿರುವ ಅನಿಲ್ ಅಂಬಾನಿ ಮಾಲೀಕತ್ವದ ರಿಲಯನ್ಸ್ ಕಂಪನಿ, ರಾಹುಲ್ ಗಾಂಧಿ ರಫೇಲ್ ಬಗ್ಗೆ ಮಾಡುತ್ತಿರುವ ಆರೋಪಗಳಿಗೆ ಯಾವುದೇ ಸಾಕ್ಷ್ಯ ನೀಡಿಲ್ಲ. ನಮ್ಮ ಕಂಪನಿ ವಿರುದ್ಧ ಸುಳ್ಳು ಆರೋಪಗಳನ್ನು ಮಾಡುತ್ತಿದ್ದಾರೆ ಎಂದು ಹೇಳಿದೆ.


ಕೇಂದ್ರದಲ್ಲಿ ಯುಪಿಎ ಅಧಿಕಾರದಲ್ಲಿದ್ದಾಗ 2004-2014ರ ಅವಧಿಯಲ್ಲಿ ರಿಲಯನ್ಸ್ ಗ್ರೂಪ್‍ಗೆ ಇಂಧನ, ಟೆಲಿಕಾಂ, ರಸ್ತೆ, ಮೆಟ್ರೋ ಸೇರಿದಂತೆ 1 ಲಕ್ಷ ಕೋಟಿ ರು. ಮೊತ್ತದ ಯೋಜನೆ ಗುತ್ತಿಗೆ ನೀಡಿತ್ತು. 10 ವರ್ಷಗಳ ಕಾಲ ಬೆಂಬಲಿಸಿದವರನ್ನು ಈಗ ಭ್ರಷ್ಟ ಉದ್ಯಮಿ ಎಂದು ಕರೆಯಲಾಗುತ್ತಿದೆ. ಹೀಗಾಗಿ 10 ವರ್ಷಗಳ ಕಾಲ ನಮಗೆ ಬೆಂಬಲ ನೀಡಿದ್ದು ಯಾರು ಎನ್ನುವುದನ್ನು ರಾಹುಲ್ ಗಾಂಧಿ ತಿಳಿಸಬೇಕು ಎಂದು ಕಿಡಿಕಾರಿದೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ