ಹೊಸದಾಗಿ ಖರೀದಿಸಿದ ವಾಹನಗಳ ನೋಂದಣಿಗೆ ತಾತ್ಕಾಲಿಕ ತಡೆ

ಶುಕ್ರವಾರ, 3 ಮೇ 2019 (12:02 IST)
ಬೆಂಗಳೂರು : ಕರ್ನಾಟಕ ಸೇರಿದಂತೆ ದೇಶಾದ್ಯಂತ ಹೊಸದಾಗಿ ಖರೀದಿಸಲಾದ ವಾಹನಗಳ ನೋಂದಣಿಯನ್ನು ತಾತ್ಕಾಲಿಕವಾಗಿ ತಡೆಹಿಡಿಯಲಾಗಿದೆ.




ಏಪ್ರಿಲ್ 1 ರೊಳಗೆ ಎಲ್ಲ ರೂಪದ ವಾಹನಗಳು ಇನ್‍ಬಿಲ್ಟ್ ಸೆಕ್ಯೂರಿಟಿ ಫೀಚರ್ಸ್ ನೊಂದಿಗೆ ಹೈ ಸೆಕ್ಯೂರಿಟಿ ರಿಜಿಸ್ಟ್ರೇಷನ್ ನಂಬರ್ ಪ್ಲೇಟನ್ನು ಅಳವಡಿಸಿಕೊಂಡು ಹೊಸ ವಾಹನಗಳು ರೋಡಿಗಿಳಿಯಬೇಕು ಎಂದು ಕೇಂದ್ರ ಸಾರಿಗೆ ಇಲಾಖೆ ಆದೇಶಿಸಿತ್ತು.


ಆದರೆ ವಾಹನಗಳ ಮಾಹಿತಿ ಸಂಗ್ರಹಿಸುವ ಕೇಂದ್ರ ಸಾರಿಗೆ ಇಲಾಖೆ ವಾಹನ ಡಾಟಾ ಬೇಸ್ ನಲ್ಲಿ ಹೈ ಸೆಕ್ಯುರಿಟಿ ನಂಬರ್ ಪ್ಲೇಟ್ ಅನ್ನು ಜೋಡಣೆ ಮಾಡದ ಹಿನ್ನೆಲೆಯಲ್ಲಿ ಕೇಂದ್ರ ಸಾರಿಗೆ ಇಲಾಖೆ ಕರ್ನಾಟಕ ಸೇರಿದಂತೆ ದೇಶಾದ್ಯಂತ ಹೊಸದಾಗಿ ಖರೀದಿಸಲಾದ ವಾಹನಗಳ ನೋಂದಣಿಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಿದೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ