ಭಗವಂತ ಪರ ಮತಯಾಚಿಸಿದ ಸಿಂಹ

ಭಾನುವಾರ, 21 ಏಪ್ರಿಲ್ 2019 (15:38 IST)
ಲೋಕಸಮರದ ಪ್ರಚಾರಕ್ಕೆ ಕೊನೆದಿನವಾಗಿರುವ ಇಂದು ಭಗವಂತ ಪರವಾಗಿ ಸಿಂಹ ಕಾಲ್ನಡಿಗೆ ಮೂಲಕ ಮತಯಾಚನೆ ಮಾಡಿದ್ರು.

ಇಂದು ಬಹಿರಂಗ ಪ್ರಚಾರಕ್ಕೆ ಕೊನೆಯ ದಿನವಾಗಿರುವ ಹಿನ್ನೆಲೆಯಲ್ಲಿ ಕಣದಲ್ಲಿರುವ ಪಕ್ಷಗಳ ಅಭ್ಯರ್ಥಿ ಪರವಾಗಿ ಪ್ರಮುಖರು ಮತಯಾಚನೆ ಮಾಡಿದ್ರು.

ಬೀದರ್ ನಲ್ಲಿ ಬಿಜೆಪಿಯಿಂದ ಬೃಹತ್ ಬೈಕ್ ರ್ಯಾಲಿ ನಡೆಸಲಾಯಿತು.

ಬೀದರ್ ನಗರದ ಗಣೇಶ್ ಮೈದಾನದಿಂದ ಪಾಪನಾಶ ವರಗೆ ರ್ಯಾಲಿ ನಡೆಯಿತು. ಮಾಜಿ‌ ಡಿಸಿಎಂ ಆರ್. ಅಶೋಕ್, ರಾಜ್ಯ ಚುನಾವಣಾ ಉಸ್ತುವಾರಿ ಮುರಳಿಧರ್ ರಾವ್, ಶಾಸಕ ಪ್ರಭು ಚವ್ಹಾಣ್ ಸೇರಿದಂತೆ ಪಕ್ಷದ ಮುಖಂಡರು ಹಾಗೂ ನೂರಾರು ಕಾರ್ಯಕರ್ತರಿಂದ ಬೈಕ್ ರ್ಯಾಲಿ ನಡೆಯಿತು.

ಇತ್ತ ಕೆಪಿಸಿಸಿ ಕಾರ್ಯಾಧ್ಯಕ್ಷರಾದ ಈಶ್ವರ ಖಂಡ್ರೆ ತವರು ಕ್ಷೇತ್ರದಲ್ಲಿ ಬಿಜೆಪಿ ಸಂಸದ ಪ್ರತಾಪ್ ಸಿಂಹ ಪಾದಯಾತ್ರೆ ಮೂಲಕ ಬಿಜೆಪಿ ಅಭ್ಯರ್ಥಿ ಭಗವಂತ್ ಖೂಬಾ ಪರ ಮತಯಾಚನೆ ಮಾಡಿದ್ರು.ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ