ಮೋದಿ ಜಾತಿ ಬಗ್ಗೆ ಮಾತನಾಡೋದಕ್ಕೆ ನಾಚಿಕೆ ಆಗ್ಬೇಕು ಎಂದ ಸಚಿವ

ಶುಕ್ರವಾರ, 19 ಏಪ್ರಿಲ್ 2019 (16:48 IST)
ಮೋದಿ ರಾಜ್ಯಕ್ಕೆ ಬಂದಾಗ ವೀರಶೈವ ಜಾತಿ ವಿಚಾರದ ಬಗ್ಗೆ ಮಾತನಾಡುತ್ತಾರೆ. ಅಷ್ಟು ದೊಡ್ಡ ಸ್ಥಾನದಲ್ಲಿ ಇದ್ದುಕೊಂಡು ತಾನೂ ಏನು ಸಾಧನೆ ಮಾಡಿದ್ದೇನೆ ಎಂದು ಪಟ್ಟಿಕೊಡುವುದಕ್ಕೆ ಆಗದೇ ಸಣ್ಣ ಸಣ್ಣ ವಿಚಾರಗಳ ಬಗ್ಗೆ ಮಾತನಾಡುತ್ತಾರೆ. ಹೀಗಂತ ಸಚಿವರೊಬ್ಬರು ಕಿಡಿಕಾರಿದ್ದಾರೆ.

ಶಿವಮೊಗ್ಗದಲ್ಲಿ ಬೃಹತ್ ನೀರಾವರಿ‌ ಸಚಿವ ಡಿ.ಕೆ.ಶಿವಕುಮಾರ್ ಪತ್ರಿಕಾಗೋಷ್ಠಿ ನಡೆಸಿದ್ದು, ಧರ್ಮದ ಹಾಗೂ ರೈತರ ವಿಚಾರವನ್ನ ಮಾತನಾಡುತ್ತಾರೆ ಮೋದಿ ಎಂದು ಟೀಕೆ ಮಾಡಿದರು.

ಕಾಂಗ್ರೆಸ್ ಪಕ್ಷ ಯಾವ ಧರ್ಮವನ್ನ ಒಡೆಯುವ ವಿಚಾರಕ್ಕೆ ಕೈಹಾಕಿಲ್ಲ. ನಿಮ್ಮ ಪಕ್ಷದ ನಾಯಕರು ಅಖಿಲ ವೀರಶೈವ ಮಹಾಸಭಾದ ಮುಖಂಡರು, ಪ್ರಧಾನ ಮಂತ್ರಿಯಾಗಿದ್ದ ಮನಮೋಹನ್ ಸಿಂಗ್ ಹಾಗೂ ಸೋನಿಯಾ ಗಾಂಧಿಯವರನ್ನ ಭೇಟಿ ಮಾಡಿದ್ದರು. ವೀರಶೈವ ಮುಖಂಡರಾದ ಯಡಿಯೂರಪ್ಪ, ಜಗದೀಶ್ ಶೆಟ್ಟರ್, ಪ್ರಭಾಕರ್ ಕೋರೆ ಹಾಗೂ ಜೆಡಿಎಸ್ ನ ವೀರಶೈವ ಮುಖಂಡರು ವೀರಶೈವ ಸಮಾಜವನ್ನ ಬೇರೆ ವಿಂಗ್ ಮಾಡಿ ಎಂದು ಮನವಿ ಮಾಡಿದ್ದರು.
ನಾವು ಅದನ್ನ ಮುಂದುವರೆಸಿದ್ದೇವೆ ವಿನಃ ನಾವು ಕೈಹಾಕಿಲ್ಲ ಎಂದರು.

ಕಾಂಗ್ರೆಸ್ ಪಕ್ಷದ ಮೇಲೆ  ಪ್ರಧಾನ ಮಂತ್ರಿ ಗೊಬೆ ಕೂರಿಸುತ್ತಿದ್ದಾರೆ. ಪ್ರಧಾನ ಮಂತ್ರಿಯಾಗಿದ್ದವರು ಈ ವಿಷಯ ವನ್ನ ಇಟ್ಟುಕೊಂಡು ರಾಜಕಾರಣ ಮಾಡುತ್ತಿದ್ದಾರೆ. ಅವರಿಗೆ ರಾಜ್ಯದಲ್ಲಿ ಸೋಲಿನ ಭೀತಿ ಕಾಡುತ್ತಿದೆ ಎಂದರು.

ಎಲ್ಲಾ ಪ್ರಧಾನ ಮಂತ್ರಿಗಳ ಕಾಲದಲ್ಲೂ ಯುದ್ಧಗಳು ನಡೆದಿವೆ. ರಾಜಕಾರಣಕ್ಕೆ ಯುದ್ಧಗಳನ್ನ ಹಾಗೂ ಯೋಧರನ್ನ ಬಳಸಿಕೊಳ್ಳುತ್ತಿರುವುದಕ್ಕೆ ನಾಚಿಕೆಯಾಗಬೇಕು ಎಂದು ದೂರಿದ್ರು.

 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ