ಚುನಾವಣೆಯಲ್ಲಿ ವಂಚಿಸಲು ಮಂಜುನಾಥನ ಫೋಟೋ ಬಳಸಿದರೆ ಶಾಪ ಸಿಗುತ್ತದೆ: ವೀರೇಂದ್ರ ಹೆಗ್ಗಡೆ

ಗುರುವಾರ, 18 ಏಪ್ರಿಲ್ 2019 (09:44 IST)
ಬೆಂಗಳೂರು: ಚುನಾವಣೆ ಸಮಯದಲ್ಲಿ ಹಣದ ಆಮಿಷದ ಜತೆಗೆ ಜನರನ್ನು ಧಾರ್ಮಿಕವಾಗಿ, ಭಾವನಾತ್ಮಕವಾಗಿ ಸೆಳೆಯುವುದು ಸಾಮಾನ್ಯ.


ಇದೀಗ ಧರ್ಮಸ್ಥಳ ಮಂಜುನಾಥ ಸ್ವಾಮಿಯ ಹೆಸರಿನಲ್ಲಿ ಚುನಾವಣೆಗೆ ಮತ ಹಾಕಿಸಲು ವಂಚಿಸುವವರ ವಿರುದ್ಧ ಧರ್ಮಾಧಿಕಾರಿ ವೀರೇಂದ್ರ ಹೆಗ್ಡೆ ಎಚ್ಚರಿಕೆ ನೀಡಿದ್ದಾರೆ.

ಚುನಾವಣೆಯಲ್ಲಿ ಧರ್ಮಸ್ಥಳ ಮಂಜುನಾಥ ಸ್ವಾಮಿಯ ಫೋಟೋ ಬಳಸುವುದು ಅಕ್ಷಮ್ಯ. ಮಂಜುನಾಥನಿರುವುದು ಜನ ಸಾಮಾನ್ಯರನ್ನು ಆಶೀರ್ವದಿಸಲು. ಜನರನ್ನು ದಾರಿ ತಪ್ಪಿಸಲು ಮಂಜುನಾಥನ ಫೋಟೋ ಬಳಸಿದರೆ ಮಂಜುನಾಥನ ಶಾಪ ಸಿಗುತ್ತದೆ ಎಂದು ವೀರೇಂದ್ರ ಹೆಗ್ಡೆ ಹೇಳಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿ       

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ