ಮೇರೆ ಪ್ಯಾರೇ ದೋಸ್ತ್... ನನ್ನ ಬಿಟ್ಟು ದುಡ್ಡಿನ ಹಿಂದೆ ಬೀಳಬೇಡ.. ಅದು ನಿನಗೆ ಏನು ಕೊಡುತ್ತೆ.. ರಾತ್ರಿ ನಿದ್ದೆ ಇಲ್ಲದೆ ನೀನು ಒದ್ದಾಡುವುದನ್ನು ನಾ ನೋಡಲಾರೆ... ಸಹಿಸಲಾರೆ.
ಹ್ಯಾಗಿದ್ದೆವು ನಾವು.. ಒಂದೇ ರೂಮಿನಲ್ಲಿ, ರಕ್ತ ಹಂಚಿಕೊಂಡ ಹಾಸ್ಟೆಲ್‌ನ ತಿಗಣೆಗಳು... ಹುಲಿ ಸಿಂಹಗಳ ಹಾಗೇ ಮನಸ್ಸು ಬಂದಾಗ ಸ್ನಾನ. ಸರಿ ರಾತ್ರಿಯಲ್ಲಿ ಎದ್ದು ಹಸಿವೆ ಎಂದು ಕೂಗಿದರೆ... ಕಿರಿಕಿರಿ ಮಾಡುತ್ತ ಓಗೊಡುವ ನೀನು ನನ್ನೊಂದಿಗೆ ತುಂಡು ಇಡ್ಲಿಗಾಗಿ ಸೆಂಟ್ರಲ್ ಬಸ್ ಸ್ಟ್ಯಾಂಡ್‌ವರೆಗೆ ನಡೆದದ್ದು ನೆನಪಿದೆಯೇ ಗೆಳೆಯ ನೆನಪಿದೆಯೇ? ...ಇದು ಕೆಎಸ್ಎನ್ ಹಾಡಲ್ಲ ತಲೆ ಅಲುಗಾಡಿಸೋದಕ್ಕೆ..
ಅಂತಹ ಹಸಿವು ತಿಗಣೆಗಳಲ್ಲಿ ನನ್ನೊಂದಿಗೆ ಇದ್ದ ನೀನು ಈಗ ದುಡ್ಡಿನ ಕಾರಣಕ್ಕೆ ಜಗತ್ತಿನ ಪರಮ ಸುಖವನ್ನು ಕಳೆದುಕೊಂಡೆ ಎಂದು ಕೇಳಿ ದುಃಖವಾಗಿದೆ. ಮತ್ತೂ ಆಗುತ್ತಿದೆ. ನೋಡಮ್ಮ ನಾನ್ ನಿನ್ ಫ್ರೆಂಡ್. ಸಾಯುವವರೆಗೆ ನಿನ್ನ ಜೊತೆಗೇ ಇರ್ತೇನೆ...
ದುಡ್ಡು ನಿನ್ನ ಹತ್ತಿರ ಜಾಸ್ತಿಯಾಗೈತೆ.. ಅದಕೆ ನಿದ್ದೆ ಇಲ್ಲ.. ಅದ್ನೆಲ್ಲ ನನ್ ಹತ್ತರ ಕಳ್ಸಿ ನಿರಾಂತಕವಾಗಿರು... ನೋಡ್ತಾ ಇರು ನಿನ್ ದುಡ್ಡಿಗೆ ಒಂದೇ ಕ್ಷಣದಲ್ಲಿ ಗತಿ ಕಾಣಸ್ತೇನೆ...