ಕಡಲೆ ಲಡ್ಡು

AvinashWD
ಸಾಮಾಗ್ರಿ:
ಕಡಲೆ ಹುಡಿ-2 ಕಪ್
ಹುಡಿಮಾಡಿದ ಸಕ್ಕರೆ-11/2 ಕಪ್
ತುಪ್ಪ-1 ಕಪ್
ಗೋಡಂಬಿ- 1 ಚಮಚ (ನುಣ್ಣನೆ ಹೆಚ್ಚಿದವುಗಳು)
ಪಿಸ್ತಾ-1 ಟೀ ಚಮಚ
ಬಾದಾಮಿ- 1 ಟೀ ಚಮಚ

ವಿಧಾನ:
ಅಗಲವಾದ ಪಾತ್ರೆಯಲ್ಲಿ ಕಡಲೆ ಹುಡಿಯನ್ನು ತುಪ್ಪದೊಂದಿಗೆ ಹದವಾಗಿ ಬೇಯಿಸಿ, ಸೌಟಿನಿಂದ ಕದಡಿಸುತ್ತಾ ಇರಿ. ಹೀಗೆ ಮಾಡುತ್ತಿರುವಾಗ ಸ್ವಲ್ಪ ಸಮಯದ ನಂತರ ಹಿತವಾದ ಪರಿಮಳ ಬಂದರೆ ಪಾಕ ತಯಾರಾಯಿತು ಎಂದರ್ಥ.

ಒಲೆಯಿಂದ ಪಾಕವನ್ನು ಕೆಳಗಿಳಿಸಿ ಆರಲು ಬಿಡಿ. ತಣ್ಣಗಾದ ನಂತರ ಸಕ್ಕರೆ, ಬಾದಾಮಿ, ಪಿಸ್ತಾ, ಗೋಡಂಬಿ ಇವುಗಳನ್ನು ಸೇರಿಸಿ ಮಿಶ್ರಣ ಮಾಡಿ. ಚಿಕ್ಕ ಚಿಕ್ಕ ಲಡ್ಡು ಉಂಡೆಗಳನ್ನಾಗಿ ಮಾಡಿ ಬಡಿಸಿ.

ವೆಬ್ದುನಿಯಾವನ್ನು ಓದಿ