ಒಂದಿಷ್ಟು ಓಡಿ, ಓಡುತ್ತಲೇ ಯೌವನ ಕಾಪಾಡಿ!

ಓಟಗಾರರಿಗೆ ಆಕಾಲ ಮೃತ್ಯು ಬಾಧಿಸದು. ನಿರಂತರವಾಗಿ ಓಡುವ ಅಭ್ಯಾಸ ಮಾಡಿಕೊಂಡಲ್ಲಿ, ಇದು ವಯಸ್ಸಾಗುವ ಪ್ರಕ್ರಿಯೆಯ ಪರಿಣಾಮಗಳನ್ನು ಕುಂಠಿತಗೊಳಿಸಬಲ್ಲದು ಎಂದು ಅಮೆರಿಕದ ಸಂಶೋಧನೆ ಸೂಚಿಸುತ್ತದೆ.

ವಯಸ್ಸಾದ ಜಾಗರ್‌ಗಳು, ನಿರಂತರ ಓಟದ ಅಭ್ಯಾಸ ಮಾಡದವರಿಗಿಂತ ಅರ್ಧದಷ್ಟು ಕಡಿಮೆ ಪ್ರಮಾಣದಲ್ಲಿ ಕಾನ್ಸ್‌ರ್ ಮುಂತಾದವುಗಳಿಂದ ಆಕಾಲ ಮೃತ್ಯುವಿಗೆ ಒಳಗಾಗುವ ಸಾಧ್ಯತೆಗಳನ್ನು ಹೊಂದಿರುತ್ತಾರೆ.

ಅವರನ್ನು ಹೆಚ್ಚಿನ ರೋಗ ರುಜಿನಗಳು ಸಹ ಬಾಧಿಸದಿರುವುದರಿಂದ ಅವರು ಹೆಚ್ಚು ಅರೋಗ್ಯಯುತ ಜೀವನವನ್ನು ನಡೆಸುತ್ತಾರೆಂದು ಸ್ಟಾನ್‌ಫರ್ಡ್ ವಿಶ್ವವಿದ್ಯಾನಿಲಯದ ವೈದ್ಯಕೀಯ ಘಟಕವು ಕಂಡುಕೊಂಡಿದೆ.

ಈ ಸಂಶೋಧನೆಗಳು ವಯಸ್ಕರು ನಿರಂತರವಾಗಿ ವ್ಯಾಯಾಮ ನಡೆಸಬೇಕೆಂಬ ಅಂಶಕ್ಕೆ ಹೆಚ್ಚಿನ ಪ್ರಾಮುಖ್ಯತೆ ತಂದಿತ್ತಿವೆ ಎಂದು ತಜ್ಞರು ಹೇಳಿದ್ದಾರೆ.

20 ವರ್ಷಗಳಿಗಿಂತ ಮೇಲ್ಪಟ್ಟ 500 ವಯಸ್ಕ ಓಟಗಾರರ(ಜಾಗಿಂಗ್) ಮೇಲೆ ಈ ಅಧ್ಯಯನ ನಡೆಸಲಾಯಿತು, ಇವರನ್ನು ಅದೇ ವಯಸ್ಸಿನ ಓಟಗಾರರಲ್ಲದ ವಯಸ್ಕರ ಗುಂಪಿನೊಂದಿಗೆ ಹೋಲಿಸಲಾಯಿತು.

19 ವರ್ಷಗಳ ಅಧ್ಯಯನ ಅವಧಿಯಲ್ಲಿ, 34% ಓಡೋ ಹವ್ಯಾಸವಿಲ್ಲದವರು ಸಾವಿಗೀಡಾದರೆ, ಓಡುವ ಪಂಗಡದ ಕೇವಲ 15% ಜನ ಸಾವಿಗೀಡಾದರು.

ವಯಸ್ಸಾದಂತೆ ಎರಡೂ ಗುಂಪುಗಳನ್ನು ಅಸಮರ್ಥತೆಗಳು ಬಾಧಿಸತೊಡಗಿದವು, ಆದರೆ ನಿರಂತರವಾಗಿ ಓಟದ ಅಭ್ಯಾಸ ನಡೆಸುತ್ತಿದವರಲ್ಲಿ, ಸುಮಾರು 16 ವರ್ಷ ತಡವಾಗಿ ಇದರ ಪರಿಣಾಮಗಳು ಕಂಡುಬರಲು ಆರಂಭವಾಯಿತು.

ಅಧ್ಯಯನದ ಪ್ರಮುಖ ಲೇಖಕ ಪ್ರೋ| ಜೇಮ್ಸ್ ಫ್ರೈಸ್ ಹೇಳುವಂತೆ, ಓಟ ಹೃದಯ ಮತ್ತು ಶ್ವಾಸಕೋಶ ಸಂಬಂಧಿ ಕಾಯಿಗಳಿಂದ ಉಂಟಾಗುವ ಮೃತ್ಯುವನ್ನು ತಡೆಗಟ್ಟುವುದಲ್ಲದೆ, ಕಾನ್ಸ್‌ರ್, ನರ ಸಂಬಂಧಿ ರೋಗಗಳು, ಸೋಂಕು ರೋಗಗಳು ಮತ್ತು ಇತರ ಕಾರಣಗಳಿಂದ ಸಂಭವಿಸಬಹುದಾದ ಮರಣದ ಪ್ರಮಾಣವನ್ನು ಸಹ ತಗ್ಗಿಸಬಲ್ಲುದು.

ಜನರಿಗೆ ವಯಸ್ಸಾದಂತೆ ಅವರ ಅರೋಗ್ಯವನ್ನು ಕಾಯ್ದುಕೊಳ್ಳಲು ಈ ಅಧ್ಯಯನದಿಂದ ದೊರಕುವ ಸುಲಭ ಉಪಾಯವೆಂದರೆ- ಏರೋಬಿಕ್ಸ್ ವ್ಯಾಯಾಮ.

ಉತ್ತಮ ವ್ಯಾಯಾಮ ವಯಸ್ಸಾದ ಜನರಿಗೆ ಚಟುವಟಿಕೆಯಿಂದ ಮತ್ತು ಸ್ವಾವಲಂಬಿಯಾಗಿರಲು, ಸಹಾಯಕವಾಗುತ್ತದೆ, ಹೃದಯದ ಅರೋಗ್ಯವನ್ನು ವೃದ್ಧಿಸುತ್ತದೆ, ತೂಕ ಮತ್ತು ಒತ್ತಡದ ಪ್ರಮಾಣವನ್ನು ಹತೋಟಿಯಲ್ಲಿಡುತ್ತದೆ ಮತ್ತು ಉತ್ತಮ ನಿದ್ದೆಗೆ ಸಹಾಯಕವಾಗಿರುತ್ತದೆ" ಎಂದು ಜೇಮ್ಸ್ ಫ್ರೈಸ್ ಹೇಳುತ್ತಾರೆ.

ವೆಬ್ದುನಿಯಾವನ್ನು ಓದಿ