ಅವಳನ್ನು ಬಿಡಲಾರೆ, ಇವಳನ್ನು ಮರೆಯಲಾರೆ ಎಂದ ಭೂಪ ಮಾಡಿದ್ದೇನು?

ಬುಧವಾರ, 3 ಜುಲೈ 2019 (15:57 IST)
ಪ್ರಶ್ನೆ: ನನಗೆ ಮದುವೆಯಾಗಿ ಮೂರು ಮಕ್ಕಳಿದ್ದಾರೆ. ನಮ್ಮ ಸಂಬಂಧಿಕರಲ್ಲೇ ಒಬ್ಬಳ ಗಂಡ ತೀರಿಹೋದನು. ಓರಿಗೆಯಲ್ಲಿ ಅವಳು ನನಗೆ ಸೊಸೆಯಾಗಬೇಕು. ನಾನು ಅವಳಿಗೆ ಸಮಾಧಾನ ಮಾಡಲು ಕೆಲವು ದಿನಗಳ ಬಳಿಕ ಹೋಗಿದ್ದೆ.

ಅವಳಿಗೂ ಒಂದು ಮಗುವಿದೆ. ಬಹಳ ವರ್ಷಗಳ ನಂತರ ಅವಳನ್ನ ನೋಡಿದ ನಾನು ಅವಳ ರೂಪಕ್ಕೆ, ಸೌಂದರ್ಯಕ್ಕೆ ಸೋತೆ. ಆ ಬಳಿಕ ಅವಳನ್ನು ಪ್ರೀತಿಸಲು ಶುರುಮಾಡಿದೆ. ಅವಳೂ ನನ್ನ ಪ್ರೀತಿ ಒಪ್ಪಿಕೊಂಡಳು. ಆಗಾಗ್ಗೆ ಸೇರಿ ಸುಖ ಅನುಭವಿಸಿದ್ದೇವೆ. ಆದರೆ ಈ ವಿಷಯ ನನ್ನ ಪತ್ನಿಗೆ ಗೊತ್ತಾಗಿದೆ. ಮನೆಯಲ್ಲಿ ನಿತ್ಯ ಕಿರಿಕಿರಿ ಶುರುವಾಗಿದೆ. ನನಗೆ ಅವಳನ್ನು ಬಿಡಲು ಮನಸ್ಸಿಲ್ಲ. ಇವಳನ್ನೂ ಮರೆಯಲು ಆಗುತ್ತಿಲ್ಲ. ಪರಿಹಾರ ವಿದ್ದರೆ ತಿಳಿಸಿ.

ಉತ್ತರ: ಗಂಡ ಸತ್ತಿರುವ ನಿಮ್ಮ ಸಂಬಂಧಿಕರಲ್ಲಿ ಎಲ್ಲ ವಿಧವೆಯರ ಜತೆ ನಿಮಗೆ ಸಂಭೋಗ ಮಾಡೋಕೆ ಆಗುತ್ತಾ? ಅನ್ನೋದನ್ನು ನಿಮ್ಮನ್ನೇ ನೀವು ಪರೀಕ್ಷಿಸಿಕೊಳ್ಳಿ. ಮೂರು ಮಕ್ಕಳಿರುವ ನೀವು ಅನೈತಿಕ ಸಂಬಂಧ ನಡೆಸುತ್ತಿರುವುದು ಸರಿಯಲ್ಲ.

ಕೂಡಲೇ ಅವಳಿಂದ ದೂರವಾಗಿ, ನಿಮ್ಮ ಪತ್ನಿ, ಮಕ್ಕಳಿಗೆ ನಿಮ್ಮ ಸ್ನೇಹ, ಪ್ರೀತಿ ಕೊಡಿ.


ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ