ಸೌಂದರ್ಯ ವರ್ಧನೆಗೆ ಜೇಡಿಮಣ್ಣು ಬಳಕೆ ಮಾಡಿ ನೋಡಿ

ಮಂಗಳವಾರ, 21 ಜೂನ್ 2016 (10:48 IST)
ಸೌಂದರ್ಯ ಅಂದ್ರೆ ನೆನಪಾಗೋದು ತಕ್ಷಣಕ್ಕೆ ಹೊಳೆಯುವ ಕೈಗೆ ಸೀಗುವ ವಸ್ತುಗಳನ್ನು ಉಪಯೋಗಿಸುವುದು. ಈ ಮಣ್ಣು ನಿಮ್ಮ ಬೆಸ್ಟ್ ಫ್ರೆಂಡ್ ಆಗಬಲ್ಲದು. ಆರೋಗ್ಯ ಹಾಗೂ ತ್ವಜೆಯನ್ನು ಹೆಚ್ಚಿಸುವಲ್ಲಿ ನಿಮ್ಮ ಚರ್ಮ ಶುದ್ಧೀಕರಣಕ್ಕೆ ಈ ಮಣ್ಣು ನಿಮ್ಮ ಬೆಸ್ಟ್ ಫ್ರೆಂಡ್ ಆಗಬಲ್ಲದು. ನಿಮ್ಮ ಆರೋಗ್ಯ ಮತ್ತು ಚರ್ಮ ಸಂಬಂಧಿತ ಸಮಸ್ಯೆಗಳಿಗೆ ಈ ಮಣ್ಣು ವರವವಾಗಬಲ್ಲದು. ಸಮಸ್ಯೆ ನಿವಾರಣೆ ಮಾಡಲು ಈ ಮಣ್ಣನ್ನು ಒಮ್ಮೆ ಬಳಕೆ ಮಾಡಿ ನೋಡಿ...
ಇತ್ತೀಚಿನ ದಿನ ಗಳಲ್ಲಿ ಮಕ್ಕಳಿಂದ ಹಿಡಿದು ವಯಸ್ಸಾದವರ ತನಕ ಸೌಂದರ್ಯ ಕಾಪಾಡಿಕೊಂಡು ಹೋಗಲು ಬಯಸುತ್ತಾರೆ. 
ನಿಮ್ಮ ಮಂದ ಚರ್ಮಕ್ಕೆ ಜೇಡಿ ಮಣ್ಣು ರಾಮಬಾಣವಾಗಬಲ್ಲದು. ಜೇಡಿಮಣ್ಣಿಗೆ ನಿಮ್ಮ ಎಲ್ಲಾ ರೀತಿಯ ಚರ್ಮಗಳಿಗೆ ಅಂದ್ರೆ ಮಂದ ಚರ್ಮಕ್ಕೆ, ಡ್ಯಾಮೇಜ್ ಚರ್ಮಕ್ಕೆ ಸಹಾಯಕಾರಿಯಾಗಬಲ್ಲದು. ನಿತ್ಯವೂ ಈ ಮಣ್ಣು ಉಪಯೋಗಿಸಿದ್ರೆ ಚರ್ಮ ಕಾಂತಿಯುತವಾಗಿ 
ಮಿರಮಿರನೆ ಮಿಂಚುತ್ತದೆ. 
 
ಅಲ್ಲದೇ ಮಾಲಿನ್ಯದಿಂದ ನಿತ್ಯವೂ ಹೊರಗೆ ಓಡಾಡುವುದರಿಂದ ಚರ್ಮದ ಕಾಳಜಿ ಮಾಡೋಕ್ಕಾಗಲ್ಲ. ನಿಮ್ಮ ಸ್ಕಿನ್ ಡಲ್, ಡ್ಯಾಮೇಜ್ ಚರ್ಮಕ್ಕೆ ಒಂದೇ ಒಂದು ವಸ್ತು ಉಪಯೋಗಕಾರಿಯಾಗಬಲ್ಲದ್ದು, ಜೇಡಿಮಣ್ಣು ನಿಮ್ಮ ಬ್ಯೂಟಿ, ಆರೋಗ್ಯ ಹಾಗೂ ತ್ವಜೆಯನ್ನು ಹೆಚ್ಚಿಸುವಲ್ಲಿ ಉಪಯೋಗವಾಬಲ್ಲದ್ದು. ನಿಮ್ಮ ಶುದ್ಧೀಕರಣಕ್ಕೆ ಈ ಮಣ್ಣು ನಿಮ್ಮ ಬೆಸ್ಟ್ ಫ್ರೆಂಡ್ ಆಗಬಲ್ಲದು.. 
 
ಅಂದಹಾಗೇ ಮಣ್ಣಿನಲ್ಲಿ ಹಲವು ವೆರೈಟಿಗಳು ಬರುತ್ತವೆ. ಸಾಮಾನ್ಯವಾಗಿ ಬೆಂಟೋನೈಟ್ ಎಂಬ ಮಣ್ಣು ಬರಬಲ್ಲದ್ದು. ಇವು ಹೆಚ್ಚಾಗಿ ಅಲ್ಯೂಮಿನಿಯಂ ಸಿಲಿಕೇಟ್ ಅಂಶ ಕೂಡ ಇದರಲ್ಲಿರುತ್ತದೆ. 
 
ಬೆಂಟೋನೈಟ್ ಜೇಡಿಮಣ್ಣು ಚರ್ಮದಲ್ಲಿನ ಕಲ್ಮಶಗಳನ್ನು ಹಾಗೂ ಹಾನಿಕಾರಕ ರಾಸಾಯನಿಕ ಅಂಶಗಳನ್ನು ತೆಗೆದುಹಾಗುತ್ತದೆ. ಹಾಗೂ ಉತ್ತಮ ಹೀರಿಕೊಳ್ಳುವ ಅಂಶಗಳನ್ನು ಹೊಂದಿದೆ. 
 
ಜೇಡಿಮಣ್ಣಿನ ಫೇಸಿಯಲ್:
ನಿಮಗೆ ನ್ಯಾಚುರಲ್ ಆಗಿ ಫೇಸಿಯಲ್ ಮಾಡಬೇಕು ಅಂದ್ರೆ ಕೈಗೆ ಸಿಕ್ಕ ಸಿಕ್ಕ ರಾಸಾಯನಿಕ ಕಾಸ್ಮೆಟಿಕ್ ಕ್ರೀಮ್‌ಗಳ ಮೊರೆ ಹೋಗಬೇಡಿ.. 
 
ಯಾಕಂದ್ರೆ ಕಾಸ್ಮೆಟಿಕ್‌ಗಳಲ್ಲಿ ಹಾನಿಕಾರಕ ರಾಸಾಯನಿಕ ಅಂಶಗಳು ನಿಮ್ಮ ಚರ್ಮಕ್ಕೆ ಹಾನಿ ಒದಗಿಸಬಲ್ಲವು. ಮಣ್ಣಿನ ಪೇಸ್ಟ್‌ನ್ನು (1:03 ರಂತೆ ನೀರಿನಲ್ಲಿ) ಬೆರೆಸಿ ಮುಖಕ್ಕೆ ಫೇಸಿಯಲ್ ಹಾಗೆಯೇ ಹಚ್ಚಿದ ಬಳಿಕ 20ರಿಂದ 25 ನಿಮಿಷಗಳ ಕಾಲದ ಬಳಿಕ ನಿಮ್ಮ ಮುಖವನ್ನು ವಾಶ್ ಮಾಡಬೇಕು. ಆಮೇಲೆ ನೋಡಿ ನಿಮ್ಮ ಚರ್ಮ ಕಾಂತಿಯುತವಾಗಿ ಹಾಗೂ ನಯವಾದ ಚರ್ಮ ನಿಮ್ಮದಾಗುತ್ತದೆ. ಅಲ್ಲದೇ ಜೇಡಿಮಣ್ಣಿನ ಪೇಸ್ಟನ್ನು ಚರ್ಮದಲ್ಲಿರುವ ಸುಟ್ಟ ಗಾಯಗಳು,ಸುಕ್ಕುಗೆಟ್ಟಿರುವ ಚರ್ಮಕ್ಕೂ ಸಹ ಉಪಯೋಗ ಮಾಡಿದ್ರೆ ಹಲವು ಚರ್ಮ ಸಂಬಂಧಿತ ಕಾಯಿಲೆಯನ್ನು ನಿವಾರಣೆ ಮಾಡಬಹುದು.
 
ಜೇಡಿಮಣ್ಣಿನಿಂದ ಸ್ನಾನ:
ಅಲ್ಲದೇ ಜೇಡಿಮಣ್ಣಿನಿಂದ ನೀವೂ ನಿತ್ಯವೂ ಸ್ನಾನ ಮಾಡುವಾಗ ಬಳಕೆ ಮಾಡಬಹುದು.. ಸ್ಕ್ರಬ್ ಆಗಿ ಈ ಮಣ್ಣನ್ನು ಉಪಯೋಗಿಸಬಹುದು. 
 
ಪಫಿ ಕಣ್ಣುಗಳಿಗಾಗಿ ಬಳಕೆ:
ನೀರಿನಲ್ಲಿ ಪೇಸ್ಟ್ ಮಾಡಿರುವ ಜೇಡಿಮಣ್ಣನ್ನು ರೋಸ್ ವಾಟರ್ ಜತೆಗೆ ಬೆರೆಸಿ ಕಣ್ಣಿನ ಕೆಳಭಾಗದಲ್ಲಿ ತೆಳ್ಳಗೆ ಹಚ್ಚಿಕೊಳ್ಳಬೇಕು, 15 ನಿಮಿಷಗಳ ಬಳಿಕ ಕಾಟನ್ ಬಟ್ಟೆಯಿಂದ ನಿಧಾನವಾಗಿ ಕಣ್ಣನ್ನು ತೊಳೆದುಕೊಳ್ಳಬೇಕು. 
 
ಇನ್ನೂ ಜೇಡಿಮಣ್ಣನ್ನು ನಿಮ್ಮ ಹೇರ್‌ಗೂ ಅಪ್ಲೇ ಮಾಡಬಹುದು.. ವಾರದಲ್ಲಿ ಒಂದು ಸಲ ಬೆಂಟೋನೈಟ್ ಜೇಡಿಮಣ್ಣುನ್ನು ಅಪ್ಲೇ ಮಾಡುವುದರಿಂದ ನಿಮ್ಮ ಕುದಲು ಹೊಳೆಪು ಹಾಗೂ ಮೃದುವಾಗಿ ಕಾಣಬಹುದಾಗಿದೆ.

ತಾಜಾ ಸುದ್ದಿಗಳನ್ನು ಓದಲು ಮೊಬೈಲ್ ಆಪ್ ಡೌನ್‍ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ