ಸಂಧಿವಾತಕ್ಕೆ ಈ ಆಹಾರ ದಿವ್ಯೌಷಧವಂತೆ..!

ಗುರುವಾರ, 22 ಜೂನ್ 2017 (11:05 IST)
ಇಂದಿನ ಒತ್ತಡದ ಬದುಕಿನಲ್ಲಿ ಹಿಂದೆಂಗಿತಲೂ ಹೆಚ್ಚು ಆರೋಗ್ಯದ ಬಗೆಗಿನ ಕಾಳಜಿ ಹೆಚ್ಚುತ್ತಿದೆ. ಅದರಲ್ಲೂ ಸೇವಿಸುವ ಆಹಾರದ ಬಗ್ಗೆ ಹೆಚ್ಚು ಗಮನ ಹರಿಸಲಾಗುತ್ತಿದೆ. ಯಾವುದನ್ನ ತಿನ್ನಬೇಕು ಇದರಿಂದ ಆರೋಗ್ಯಕ್ಕಾಗುವ ಅನುಕೂಲಗಳೇನು..? ಎಂಬ ಚರ್ಚಾ ಮನೋಭಾವ ಹೆಚ್ಚಿದೆ. ಸಸ್ಯಾಹಾರ ಆರೋಗ್ಯದ ದೃಷ್ಟಿಯಿಂದ ಉತ್ತಮ ಎನ್ನಲಾಗುತ್ತದೆ.ಮಾಂಸಾಹಾರಗಳು ಬೇಗ ದೇಹಕ್ಕೆ ಪೋಷಣೆ ಒದಗಿಸುತ್ತವೆ ಎಂಬ ಮಾತಿದೆ. ಅದರಲ್ಲೂ ಸೀ ಫುಡ್`ಗೆ ಆರೋಗ್ಯದ ದೃಷ್ಟಿಯಿಂದ ಪ್ರಮುಖ್ಯತೆ ಇದೆ. ಇತ್ತೀಚಿನ ಸಮೀಕ್ಷೆಯೊಂದು ದಿನಕ್ಕೆರಡು ಭಾರೀ ಮೀನಿ ಸೇವನೆ ಸಂಧಿವಾತಕ್ಕೆ ದಿವ್ಯೌಷಧ ಎನ್ನುತ್ತಿದೆ.
 

ಮೀನಿನಲ್ಲಿ ಒಮೇಗಾ-3 ಫ್ಯಾಟಿ ಆಸಿಡ್ ಹೇರಳವಾಗಿರುವುದರಿಂದ ದೇಹದ ಎಲ್ಲ ಅಂಗಾಂಗಳಿಗೂ ಒಳ್ಳೆಯ ಪೋಷಣೆ ನೀಡುತ್ತದೆ. ಸಂಧಿ ನೋವು ಸಮಸ್ಯೆಗೆ ಮೀನಿನೆಣ್ಣೆಯ ಻ಂಶಗಳಿರುವ ೌಷಧವನ್ನ ನೀಡಲಾಗುತ್ತದೆ. ಇದರಿಂದ ನೋವು ನಿವಾರಣೆಯಾಗುತ್ತಿದೆ. ಔಷಧಿ ಬದಲು ಮೀನನ್ನ ತಿಂದರೆ ಸಂಧಿಯೂತ, ಸಂಧಿನೋವಿನ ಸಮಸ್ಯೆ ನಿವಾರಣೆಯಾಗುತ್ತೆ ಎನ್ನುತ್ತಿದೆ ಸಂಶೋಧನೆ.

ಸಂಧಿವಾತ ಚಿಕಿತ್ಸಾ ಸಂಶೋಧನೆಯಲ್ಲಿ ಮುಂಚೂಣಿಯಲ್ಲಿರುವ ಬೋಸ್ಟನ್`ನ ಬ್ರಿಘಮ್ ಅಂಡ್ ವುಮೆನ್ಸ್ ಆಸ್ಪತ್ರೆಯ ತಜ್ಞರು 176 ಮಂದಿಯನ್ನ ಸಂಶೋಧನೆಗೆ ಒಳಪಡಿಸಿದ್ದಾರೆ. ಮೀನು ತಿಂದವರಲ್ಲಾಗುವ ಆರೋಗ್ಯದ ಬದಲಾವಣೆಯನ್ನ ಪರೀಕ್ಷಿಸಿದ್ದಾರೆ. ದಿನಕ್ಕೆರಡು ಬಾರಿ ಮೀನು ತಿನ್ನುವವರಲ್ಲಿ ಸಂಧಿವಾತ ಗಮನಾರ್ಹ ರೀತಿಯಲ್ಲಿ ಕಡಿಮೆಯಾಗಿರುವುದು ಕಂಡು ಬಂದಿದೆ.  

`ನಮ್ಮ ಸಂಶೋಧನೆಯಲ್ಲಿ ಮೀನು ಹೆಚ್ಚು ತಿನ್ನುವುದರಿಂದ ಸಂಧಿವಾತ ಕಡಿಮೆಯಾಗಿರುವುದು ಕಂಡುಬಂದಿದೆ. ಇದರಿಂದಾಗಿ ರೋಗಿಗಳು ಬೇಗ ಗುಣಮುಖರಾಗಿರುವುದು ಕಂಡು ಬಂದಿದೆ ಎಂದು ಸಂಶೊಧಕಿ ಡಾ. ಸಾರಾ ಹೇಳಿದ್ಧಾರೆ.
.

ವೆಬ್ದುನಿಯಾವನ್ನು ಓದಿ