ಗ್ರೀನ್ ಟೀ ಚಮತ್ಕಾರ

ಶುಕ್ರವಾರ, 8 ಜೂನ್ 2018 (16:09 IST)
ಬೆಳಿಗ್ಗೆ ಎದ್ದು ಒಂದು ಕಪ್ ಬಿಸಿ ಬಿಸಿ ಗ್ರೀನ್ ಟೀ ಕುಡಿಯಿರಿ. ಇದು ದೇಹದ ಕೊಬ್ಬು ಕರಗಿಸುವುದರ ಜತೆ  ಚರ್ಮಕ್ಕೆ, ಆರೋಗ್ಯಕ್ಕೆ ಪೂರಕವಾಗಿದೆ. ಗಿಡ ಮೂಲಿಕೆಯಿಂದ ತಯಾರಿಸಿದ ಗ್ರೀನ್ ಟೀಯಲ್ಲಿ ಆಂಟಿಯಾಕ್ಸಿಡೆಂಟ್ ಹೆಚ್ಚಿರುತ್ತೆದೆ. ಗ್ರೀನ್ ಟೀ ಸೇವನೆಯಿಂದ ಹೆಚ್ಚು ತಿನ್ನುವುದನ್ನು ತಡೆದು ಹಸಿವನ್ನು ನಿಯಂತ್ರಿಸಬಹುದು. ಇದರಲ್ಲಿ ದೇಹದಲ್ಲಿ ಅನವಶ್ಯಕವಾಗಿ ತುಂಬಿಕೊಂಡಿರುವ ಬೊಜ್ಜನ್ನು ಕರಗಿಸುವ ವಿಶೇಷ ಗುಣವೂ ಇದೆ
ಮಧುಮೇಹ - ರಕ್ತದಲ್ಲಿನ ಸಕ್ಕರೆ ಅಂಶವನ್ನು ನಿಯಂತ್ರಿಸಿ ಮಧುಮೇಹವನ್ನು ನಿಯಂತ್ರಣದಲ್ಲಿರಿಸಲು ಗ್ರೀನ್ ಟೀ ಸಹಾಯ ಮಾಡುತ್ತದೆ.
 
ಹೃದಯದ ಆರೋಗ್ಯಾವನ್ನು ಕಾಪಾಡುತ್ತದೆ - ಗ್ರೀನ್ ಟೀ ರಕ್ತದಲ್ಲಿನ ಸಕ್ಕರೆ ಅಂಶವನ್ನು ನಿಯಂತ್ರಿಸಿ
ರಕ್ತನಾಳಗಳ ಹೆಪ್ಪುಗಟ್ಟುವಿಕೆಯನ್ನು ತಡೆಯುತ್ತದೆ. ಆದ್ದರಿಂದ ಗ್ರೀನ್ ಟೀ ಸೇವನೆಯಿಂದ ಹೃದಯಾಘಾತದ ಸಾಧ್ಯತೆಯನ್ನು ಕಡಿಮೆ ಮಾಡುತ್ತದೆ.
 
ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ - ಗ್ರೀನ್ ಟೀಯಲ್ಲಿರುವ ಆಂಟಿಯಾಕ್ಸಿಡೆಂಟ್‌ಗಳು ರೋಗ ನಿರೋಧಕ ಶಕ್ತಿಯೂ ಹೆಚ್ಚುವುದು.
 
ಬೊಜ್ಜು ಕರಗಿಸುತ್ತದೆ: ಬೊಜ್ಜು ಹೊಟ್ಟೆ ಹೆಚ್ಚಿನವರ ಸಮಸ್ಯೆಯಾಗಿದೆ. ಗ್ರೀನ್ ಟೀ ಕುಡಿದು 30 ನಿಮಿಷ ನಡೆಯುವ ವ್ಯಾಯಾಮ ಮಾಡಿದರೆ ಬೊಜ್ಜು ಹೊಟ್ಟೆ ನಿಧಾನಕ್ಕೆ ಕರಗಲಾರಂಭಿಸುತ್ತದೆ.
 
ಬುದ್ಧಿಮತ್ತೆಯನ್ನು ಹೆಚ್ಚಿಸುತ್ತದೆ - ಹಸಿರು ಟೀಯಲ್ಲಿ ಕೆಫೇನ್ ಅತ್ಯಂತ ಸಮರ್ಪಕ ಪ್ರಮಾಣದಲ್ಲಿರುವ ಕಾರಣ ಮೆದುಳಿನ ಕ್ಷಮತೆ ಹೆಚ್ಚಿಸಲು ಇದು ಹೊರಡಿರುವ ನ್ಯೂರಾನ್‌ಗಳೆಂಬ ನರವ್ಯವಸ್ಥೆಯ ಕಣಗಳು ನೆರವಾಗುತ್ತವೆ.
 
ಕ್ಯಾನ್ಸರ್ ಬರದಂತೆ ತಡೆಯುತ್ತದೆ - ಹಸಿರು ಟೀ ಯಲ್ಲಿರುವ ವಿವಿಧ ಆಂಟಿ ಆಕ್ಸಿಡೆಂಟ್‌ಗಳು ಫ್ರೀ ರ್‍ಯಾಡಿಕಲ್ ಕಣಗಳನ್ನು ಹಿಮ್ಮೆಟ್ಟಿಸಿ ಕ್ಯಾನ್ಸ್ರರ್ ತಗಲುವ ಸಂಭವವನ್ನು ಕಡಿಮೆಗೊಳಿಸುತ್ತವೆ. ವಿಶೇಷವಾಗಿ ಸ್ತನಕ್ಯಾನ್ಸರ್, ಕರುಳು ಕ್ಯಾನ್ಸರ್ ಮತ್ತು ಪ್ರಾಸ್ಟ್ರೇಟ್ ಗ್ರಂಥಿಯ ಕ್ಯಾನ್ಸರ್ ಬರದಂತೆ ಸಮರ್ಥವಾಗಿ ತಡೆಯುತ್ತದೆ ಎಂದು ತಿಳಿದುಬಂದಿದೆ.
 
ಚರ್ಮದ ಕಾಂತಿಯನ್ನು ಹೆಚ್ಚಿಸುತ್ತದೆ - ಗ್ರೀನ್ ಟೀ ಕುಡಿಯುವುದಿಂದ ದೇಹ ತೂಕ ಕಡಿಮೆ ಆಗುವುದರೊಂದಿಗೆ ದೇಹದ ಕಾಂತಿ ಹೆಚ್ಚುಸುತ್ತದೆ, ಹಾಗೂ ನಿಮ್ಮ ತ್ವಚೆಯ ಸಮಸ್ಯೆಗಳಿಗೂ ಇದರಿಂದ ಪರಿಹಾರವನ್ನು ಕಂಡುಕೊಳ್ಳ ಬಹುದಾಗಿದೆ.
 
ಬ್ಯಾಕ್ಟೀರಿಯಾಗಳನ್ನು ಕೊಲ್ಲುತ್ತದೆ - ನಮ್ಮ ದೇಹದಲ್ಲಿ ಒಳಪ್ರವೇಶಿಸಿ ವಿಶೇಷವಾಗಿ ಹಲ್ಲು ಮತ್ತು ಗಂಟಲಿನೊಳಗೆ ಮನೆ ಮಾಡಿಕೊಂಡಿರುವ ವಿವಿಧ ಕೆಟ್ಟ ಬ್ಯಾಕ್ಟೀರಿಯಾಗಳನ್ನು ಕೊಲ್ಲುವಲ್ಲಿಯೂ ಗ್ರೀನ್ ಟೀ ಸಹಾಯ ಮಾಡುತ್ತದೆ.
 
ಹೊಟ್ಟೆ ನೋವಿನ ಶಮನ ಮಾಡುತ್ತದೆ - ಗ್ರೀನ್ ಟೀಯೊಂದಿಗೆ ಸಣ್ಣ ತುಂಡು ಶುಂಠಿಯನ್ನು ಬೆರೆಸಿ ಸೇವಿಸುವುದು ಹೊಟ್ಟೆ ನೋವನ್ನು ಹೋಗಲಾಡಿಸುತ್ತದೆ ಮತ್ತು ಆರೋಗ್ಯಕ್ಕೆ ಉತ್ತಮ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ