ಸಾಲ ಕೊಡಿಸು ಅಂದೋಳು ಈಗ ಜೀವನ ಕೊಡು ಅಂತಿದ್ದಾಳೆ…!

ಬುಧವಾರ, 10 ಏಪ್ರಿಲ್ 2019 (20:22 IST)
ಪ್ರಶ್ನೆ: ಮಾನ್ಯರೇ, ನಾನೊಂದು ಸಮಸ್ಯೆಯ ಸುಳಿಯಲ್ಲಿ ಸಿಲುಕಿ ಮಾಡಬಾರದ ತಪ್ಪು ಮಾಡಿ ನರಳುತ್ತಿದ್ದೇನೆ. ತಾವು ಹಲವು ಬಾರಿ ಉತ್ತಮ ಸಲಹೆ ನೀಡಿ ಸಮಸ್ಯೆಗಳನ್ನು ಸರಿಪಡಿಸಿರುವುದನ್ನು ಓದಿದ್ದೇನೆ. ನನ್ನ ಸಮಸ್ಯೆ ಏನೆಂದರೆ, ನನ್ನ ಪರಿಚಯದ ಗಂಡ ಬಿಟ್ಟಿರುವ ಸ್ತ್ರೀಯೊಬ್ಬರು ನನ್ನ ಸ್ನೇಹಿತನಿಗೆ ಸಾಲವಾಗಿ ಒಂದಷ್ಟು ಹಣ ನೀಡಿದ್ದರು. ಆತ ಹಣ ಮರಳಿಸದೇ ಇದ್ದಾಗ, ನನ್ನ ಬಳಿ ಬಂದು ಸಮಸ್ಯೆ ಹೇಳಿಕೊಂಡು ಅವರ ಹಣ ಮರಳಿ ಸಿಗುವಂತೆ ಮಾಡಬೇಕೆಂದು ಕೇಳಿಕೊಂಡಿದ್ದರು. ಅದರಂತೆ ನಾನು ಪ್ರಯತ್ನ ಮುಂದುವರಿಸಿದ್ದೆ. ನನ್ನ ಸ್ನೇಹಿತ ಪಡೆದಿದ್ದ ಹಣದಲ್ಲಿ ಅರ್ಧ ಹಣ ವಾಪಸ್ ಕೊಟ್ಟನು. ಹಣದ ವಿಷಯವಾಗಿ ಪದೇ ಪದೇ ನನ್ನನ್ನು ಭೇಟಿ ಮಾಡುತ್ತಿದ್ದ ಅವಳು ನನ್ನ ಜತೆಗೆ ನನಗೆ ಅರಿವಿಲ್ಲದಂತೆ ಸಲುಗೆ ಬೆಳೆಸಿಕೊಂಡಳು. ಆಕೆಗೆ ಗಂಡ ಇಲ್ಲ. ಹೀಗಾಗಿ ಮಾನವೀಯತೆ ನೆಲೆಯಲ್ಲಿ ಸಹಾಯ ಮಾಡಲು ಮುಂದಾಗಿದ್ದೆ. ಆದರೆ ಆಕೆ ನನ್ನನ್ನು ಪ್ರೀತಿಸಲು ಶುರುಮಾಡಿದ್ದಳು. ಅಷ್ಟೇ ಅಲ್ಲ ಕೆಲವೇ ದಿನಗಳ ಬಳಿಕ ನಾವಿಬ್ಬರೂ ಲೈಂಗಿಕ ಸಂಪರ್ಕವನ್ನೂ ಹೊಂದಿದ್ದೇವೆ. ಕಳೆದೊಂದು ವರ್ಷದಿಂದ ಆಕೆ ನನ್ನ ಜತೆ ಮಲಗುತ್ತಿದ್ದಾಳೆ. ನನಗೆ ಮದುವೆಯಾಗಿಲ್ಲ. ಆದರೆ ಅವಳು ಮದುವೆಯಾಗಿ ಗಂಡ ಬಿಟ್ಟವಳು. ಈಗ ನನಗೆ ಜೀವನ ಕೊಡು ಅಂತ ಕೇಳುತ್ತಿದ್ದಾಳೆ. ಪರಿಹಾರ ತಿಳಿಸಿ.

ಉತ್ತರ: ಕಾಮಾತುರಾಣಂ ನ ಭಯಂ ನ ಲಜ್ಜಾ ಅನ್ನೋದು ಇದಕ್ಕೆ. ಕಾಮಕ್ಕೆ ಕಣ್ಣಿಲ್ಲ ಎಂದು ಹಿರಿಯರು ಹೇಳಿದ್ದಾರೆ. ನೀವು ಹಣದ ವಿಷಯದಲ್ಲಿ ಸಹಾಯ ಮಾಡಲು ಹೋಗಿ ಆಕೆಯೊಂದಿಗೆ ಸಲುಗೆ ಬೆಳೆಸಿಕೊಂಡಿದ್ದು ತಪ್ಪು. ಪರಿಚಯವಿಲ್ಲದ ಆಕೆಯೊಂದಿಗೆ ವರ್ಷದಿಂದ ಸಂಭೋಗ ನಡೆಸುತ್ತಿರುವುದು ಎರಡನೇ ತಪ್ಪು. ನೀವಿನ್ನೂ ಅವಿವಾಹಿತ ಅಂತ ಹೇಳಿದ್ದೀರಿ.

ಆದರೆ ಆಕೆಯ ವಯಸ್ಸನ್ನೂ ನೀವು ತಿಳಿಸಿಲ್ಲ. ಇರಲಿ, ಆಕೆ ನಿಮ್ಮ ದೇಹವನ್ನು ಈಗಾಗಲೇ ಹಂಚಿಕೊಂಡಿದ್ದಾಳೆ. ಅವಳು ನಿಮಗೆ ಇಷ್ಟವಾಗಿದ್ದಲ್ಲಿ ಅವಳನ್ನು ಮದುವೆಯಾಗಿ ಬಾಳು ಕೊಡಿ. ಇಲ್ಲವೇ ಆಕೆಯೊಂದಿಗೆ ಕೇವಲ ಸಂಭೋಗಕ್ಕಾಗಿ ನೀವು ಜತೆಗಿದ್ದರೆ ಕೂಡಲೇ ಆಕೆಯ ಸಹವಾಸದಿಂದ ಶೀಘ್ರ ಹೊರಬನ್ನಿ. ಅನೈತಿಕ ಸಂಬಂಧ ಹಲವು ಅನಾಹುತಗಳಿಗೆ ಕಾರಣವಾಗಬಹುದು.


ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ