ನೀವು ತಿನ್ನುತ್ತಿರುವ ಬ್ರೇಡ್ ಕ್ಯಾನ್ಸರ್ ತಂದೊಡ್ಡಬಲ್ಲದು? ಹುಷಾರ್..

ಮಂಗಳವಾರ, 24 ಮೇ 2016 (12:06 IST)
ನೀವೂ ಬ್ರೇಡ್ ಪ್ರಿಯರೇ..? ನಿತ್ಯ ನಿಮ್ಮ ಆಹಾರದಲ್ಲಿ ಅಥವಾ ಬ್ರೇಕ್‌ಫಾಸ್ಟ್ ವೇಳೆಲಿ ಬ್ರೇಡ್ ಸೇವನೆ ಮಾಡ್ತಿದ್ದೀರಾ? ಯೆಸ್ ಅಂತಾದರೆ, ನೀವೂ ಸೇವಿಸುತ್ತಿರುವ ಬ್ರೇಡ್ ನಿಮ್ಮ ಆರೋಗ್ಯಕ್ಕೆ ಎಷ್ಟು ಸೇಫ್ ಅಂತ ಯೋಚನೆ ಮಾಡಿದ್ದೀರಾ. ಈ ಸ್ಟೋರಿಯನ್ನೊಮ್ಮೆ ನೋಡಿ.

 
ಯೆಸ್, ಬ್ರೇಡ್ ಪ್ರಿಯರಿಗೆ ಈ ಸ್ಟೋರಿ ಆಶ್ಚರ್ಯ ಉಂಟು ಮಾಡಬಲ್ಲದ್ದು. ಯಾಕೆಂದ್ರೆ ಬ್ರೇಡ್‌ನಲ್ಲಿದೆ ಹಲವು ಹಾನಿಕಾರಕ ಅಂಶಗಳು. ಇದನ್ನು ನಾವು ಹೇಳ್ತಿಲ್ಲ.. ಈ ಬಗ್ಗೆ ಸಂಶೋಧನೆ ಹೇಳಿದೆ. ದೆಹಲಿಯ ವಿಜ್ಞಾನ ಹಾಗೂ ಪರಿಸರ ಸಂಶೋಧನಾ ಸಂಸ್ಥೆ ಮಾಹಿತಿ ಬಹಿರಂಗ ಪಡಿಸಿದೆ. 
 
ನಿಮ್ಮ ಸೇವನೆ ಮಾಡುತ್ತಿರುವ ಬ್ರೇಡ್ ಕ್ಯಾನ್ಸರ್‌ಗೆ ಕಾರಣವಾಗಬಹುದು.. ಅಲ್ಲದೇ ಬನ್ಸ್, ಬರ್ಗರ್ ಕೂಡ ಆರೋಗ್ಯದ ಮೇಲೆ ಪರಿಣಾಮ ಬೀರಬಲ್ಲದು. 
 
ವರದಿ ಪ್ರಕಾರ ಶೇ 84ರಷ್ಟು ಒಟ್ಟು 38 ಪ್ರಸಿದ್ಧ ಬ್ರೇಡ್ ಬ್ರ್ಯಾಂಡ್‌ಗಳನ್ನು ಪರೀಕ್ಷಿಸಿದಾಗ ಬ್ರೇಡ್‌ಗಳಲ್ಲಿ ಪೋಟ್ಯಾಶಿಯಂ  ಬ್ರೋಮೆ‌ಟ್‌ ಅಂಶಗಳ ಮಿಶ್ರಣದಿಂದ ಮಾಡಲಾಗುತ್ತದೆ. ಈ ಅಂಶಗಳು ಕ್ಯಾನ್ಸರ್‌ನ್ನು ತಂಡೊಡ್ಡಬಲ್ಲದು ಎಂದು ವರದಿ ತಿಳಿಸಿದೆ.
 
ಇನ್ನೂ ವಿಶೇಷ ಅಂದ್ರೆ ಭಾರತವನ್ನು ಹೊರೆತುಪಡಿಸಿ ಉಳಿದ ದೇಶಗಳಲ್ಲಿ ಕ್ಯಾನ್ಸರ್‌ಗೆ ಕಾರಣವಾಗಬಲ್ಲ ಪೋಟ್ಯಾಶಿಯಸ  ಬ್ರೋಮೆ‌ಟ್‌ ಅಂಶಗಳನ್ನು ಬ್ಯಾನ್ ಮಾಡಿದೆ. 
 
ಬ್ರೇಡ್ ತಯಾರಿಸುವ ಸಮಯದಲ್ಲಿ ಕೆಮಿಕಲ್ ಮಿಶ್ರಣ ಮಾಡಲಾಗುತ್ತದೆ ಆದ್ದರಿಂದ ಸೇಫ್ ಅಲ್ಲ. ಹಾಗಾಗಿ ಪೋಟ್ಯಾಶಿಯಂ ಬ್ರೋಮೆ‌ಟ್‌ನಿಂದ ಹಲವು ಬ್ರೇಡ್ ಹಾಗೂ ಬೇಕರಿ ತಿನಿಸುಗಳನ್ನು ತಯಾರಿಸಲಾಗ್ತಿದೆ ಎಂದು ರಿಪೋರ್ಟ್ ಹೇಳಿದೆ. 
 
ಈ ಹಿನ್ನೆಲೆಯಲ್ಲಿ ಪಬ್ಲಿಕ್ ಆರೋಗ್ಯ ಮುಖ್ಯವಾದದ್ದು, ಆರೋಗ್ಯಕ್ಕೆ ಹಾನಿಕಾರಕ ಅಂಶವಿರುವ ಯಾವುದೇ ಆಹಾರವಿರದ್ದಲ್ಲಿ ಅದನ್ನು ಪರೀಕ್ಷೆಗೆ ಒಳಪಡಿಸಲಾಗುವುದು ಎಂದು ಕೇಂದ್ರ ಆರೋಗ್ಯ ಸಚಿವ ಜೆ.ಪಿ ನಡ್ಡಾ ಹೇಳಿದ್ದಾರೆ. 

ತಾಜಾ ಸುದ್ದಿಗಳನ್ನು ಓದಲು ಮೊಬೈಲ್ ಆ್ಯಪ್‌ನ್ನು ಡೌನ್‌ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ