ಹಾಸಿಗೆ ಸುಖದಲ್ಲಿ ಸಮಸ್ಯೆ ಇದ್ರೆ ಇದನ್ನ ಟ್ರೈ ಮಾಡಿ

ಶನಿವಾರ, 10 ಆಗಸ್ಟ್ 2019 (16:17 IST)
ಯೋಗ ಆರೋಗ್ಯ ಭಾಗ್ಯಕ್ಕೆ ಪೂರಕ. ಅಷ್ಟೇ ಅಲ್ಲ ಸಂಸಾರದ ಸಮಾಗದಲ್ಲೂ ತನ್ನದೇ ಆದ ಪ್ರಧಾನ ಪಾತ್ರವನ್ನು ಪರೋಕ್ಷವಾಗಿ ವಹಿಸುತ್ತಲೇ ಇದೆ.  ಸಂಭೋಗ ಸುಖಕ್ಕೆ ಯೋಗದ ಈ ಭಂಗಿ ಪೂರಕವಾಗಿದೆ.

ಯೋಗಾಸನದ ಭಂಗಿಯಾಗಿರೋ ಹಲಾಸನ ಪುರುಷ- ಮಹಿಳೆಯ ಲೈಂಗಿಕ ಶಕ್ತಿ ವೃದ್ಧಿಸುತ್ತದೆ. ನೆಲದ ಮೇಲೆ ಅಂಗಾತ ಮಲಗಬೇಕು. ಉಸಿರನ್ನು ಎಳೆದುಕೊಳ್ಳುತ್ತ ಕಾಲುಗಳನ್ನು ಮೇಲಕ್ಕೆ ಎತ್ತಬೇಕು. ಎರಡು ಕೈಗಳನ್ನು ಬೆನ್ನಿಗೆ ಆಧಾರವಾಗಿರುವಂತೆ ನೋಡಿಕೊಂಡು ಕಾಲುಗಳನ್ನು ಭೂಮಿಗೆ ತಾಗಿಸಬೇಕು. ನಂತ್ರ ಕೈಗಳನ್ನು ಕಾಲಿನ ವಿರುದ್ಧ ದಿಕ್ಕಿಗೆ ಚಾಚಬೇಕು. ಇದರಿಂದ ಪುರುಷ ಹಾಗೂ ಮಹಿಳೆ ಇಬ್ಬರ ಲೈಂಗಿಕ ಗ್ರಂಥಿಗಳನ್ನು ಬಲಪಡಿಸಿ, ಸಕ್ರಿಯಗೊಂಡು  ಲೈಂಗಿಕ ಶಕ್ತಿಯನ್ನು ಹೆಚ್ಚಿಸುತ್ತದೆ.

ಹಾಗೇ ಉಷ್ಠಾಸನ ಕೂಡ ಲೈಂಗಿಕ ಜೀವನ ಉತ್ತಮಗೊಳಿಸುವಲ್ಲಿ ಸಹಕಾರಿಯಾಗಿದೆ. ಮೊದಲು ನೆಲದ ಮೇಲೆ ಮಂಡಿಯೂರಿ ಕುಳಿತುಕೊಳ್ಳಬೇಕು. ನಂತ್ರ ಶರೀರವನ್ನು ಮೇಲೆತ್ತಿ. ಕೈಗಳನ್ನು ಕಾಲಿಗೆ ತಾಗಿಸಿ, ಶರೀರವನ್ನು ನಿಧಾನವಾಗಿ ಹಿಂದಕ್ಕೆ ಚಾಚಬೇಕು.

ಇದು  ಜನನಾಂಗದ ರಕ್ತ ಪರಿಚಲನೆಯನ್ನು ಉತ್ತಮಗೊಳಿಸುತ್ತದೆ. ಪ್ರತಿದಿನ ಸರಿಯಾದ ವಿಧಾನದಲ್ಲಿ ಈ ಯೋಗಾಭ್ಯಾಸವನ್ನು ಮಾಡಿದರೆ ಲೈಂಗಿಕ ಸಮಸ್ಯೆಗಳು ದೂರವಾಗುತ್ತವೆ.

 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ