ಬೆಂಗಳೂರು : ಯಿಸ್ಟ್ ಸೋಂಕು ಮಹಿಳೆಯರಲ್ಲಿ ಅತ್ಯಂತ ಸಾಮಾನ್ಯವಾಗಿದೆ. 75% ಮಹಿಳೆಯರು ಈ ಸೋಂಕಿಗೆ ತುತ್ತಾಗುತ್ತಾರೆ. ಈ ಸೋಂಕಿನಿಂದ ಹಾನಿಯಾಗದಿದ್ದರೂ ಇದು ನೋವಿನಿಂದ ಕೂಡಿದೆ. ಇದಕ್ಕೆ ಸರಿಯಾಗಿ ಚಿಕಿತ್ಸೆ ನೀಡದಿದ್ದರೆ ಮತ್ತೆ ಮತ್ತೆ ಬರಬಹುದು. ಹಾಗಾಗಿ ಈ ಮನೆಮದ್ದುಗಳನ್ನು ಬಳಸಿ.
*ತೆಂಗಿನ ಎಣ್ಣೆ ಕಿರಿಕಿರಿ, ಊತ ಮುಂತಾದ ಚರ್ಮದ ಸಮಸ್ಯೆಗೆ ಪರಿಹಾರವನ್ನು ನೀಡುತ್ತದೆ. ಇದು ಯಿಸ್ಟ್ ವಿರುದ್ಧ ಹೋರಾಡುವ ಆಂಟಿಫಂಗಲ್ ಗುಣಗಳನ್ನು ಹೊಂದಿದೆ. ಪೀಡಿತ ಪ್ರದೇಶಕ್ಕೆ ನೇರವಾಗಿ ಹಚ್ಚಿ. ಇದನ್ನು ದಿನಕ್ಕೆ 2-3 ಬಾರಿ ಬಳಸಿ.
*ಅಲೋವೆರಾ ಯಿಸ್ಟ್ ಸೋಂಕನ್ನು ಗುಣಪಡಿಸಲು ಸಹಾಯ ಮಾಡುತ್ತದೆ. ಇದು ಆಂಟಿಫಂಗಲ್ ಗುಣಗಳನ್ನು ಹೊಂದಿದೆ. ಯಿಸ್ಟ್ ಸಮಸ್ಯೆ ಇದ್ದ ಪ್ರದೇಶಕ್ಕೆ ಹಚ್ಚಿ. ದಿನಕ್ಕೆ 2-3 ಬಾರಿ ಬಳಸಿ.