ತೂಕ ಇಳಿಸಲು ಡಯಟ್ ಮಾಡುತ್ತಿದ್ದೀರಾ? ಈ ಸುದ್ದಿಯನ್ನು ತಪ್ಪದೇ ಓದಿ

ಗುರುವಾರ, 27 ಏಪ್ರಿಲ್ 2017 (07:07 IST)
ಬೆಂಗಳೂರು: ಹೆಚ್ಚಿನವರು ತೂಕ ಇಳಿಸಿಕೊಳ್ಳಲು ಅದೇನೇನೋ ಸರ್ಕಸ್ ಮಾಡುತ್ತಾರೆ. ತಮ್ಮ ಆಹಾರ ಶೈಲಿಯಲ್ಲಿ ಬದಲಾವಣೆ ಮಾಡಿಕೊಳ್ಳುತ್ತಾರೆ. ಆದರೆ ಡಯಟ್ ಆಹಾರಗಳಿಂದ ತೊಂದರೆಯೂ ಇದೆ ಎಂದು ತಿಳಿದುಬಂದಿದೆ.

 
ಈ ರೀತಿ ತೂಕ ಇಳಿಸಿಕೊಳ್ಳಲು ತೆಗೆದುಕೊಳ್ಳುವ ಡಯಟ್ ಆಹಾರ ಉತ್ಪನ್ನಗಳು ತೂಕ ಕಡಿಮೆ ಮಾಡುವ ಬದಲು ತೂಕ ಹೆಚ್ಚಿಸಲೂ ಕಾರಣವಾಗಬಹುದು ಎಂದು ಸಂಶೋಧಕರು ಕಂಡುಕೊಂಡಿದ್ದಾರೆ.

ಹೆಚ್ಚು ಸಕ್ಕರೆ ಅಂಶ ಅಥವಾ ಕಡಿಮೆ ಕೊಬ್ಬಿನ ಅಂಶವಿರುವ ಆಹಾರ ಉತ್ಪನ್ನಗಳು ಬೊಜ್ಜು ಬೆಳೆಯಲು ಕಾರಣವಾಗಬಹುದಂತೆ. ಹಾಗಂತ ಜಾರ್ಜಿಯಾನಾ ವಿವಿಯ ಸಂಶೋಧಕರು ಕಂಡುಕೊಂಡಿದ್ದಾರೆ.

ಇಂತಹ ಆಹಾರ ವಸ್ತುಗಳಲ್ಲಿ ಸಕ್ಕರೆ ಅಂಶ ಹೆಚ್ಚು. ಇದು ಫಲಕಾರಿಯಾಗುವುದಕ್ಕಿಂತ ಹೆಚ್ಚು, ಪಿತ್ತಜನಕಾಂಗ ಸಂಬಂಧಿ ರೋಗ ಮತ್ತು ಬೊಜ್ಜು ಬೆಳೆಯುವುದಕ್ಕೆ ಕಾರಣವಾಗುತ್ತದೆ ಎಂದು ಸಂಶೋಧಕರು ಎಚ್ಚರಿಸಿದ್ದಾರೆ. ಸಾಕಷ್ಟು ಅಧ್ಯಯನ ಮಾಡಿದ ನಂತರ ಈ ಅಭಿಪ್ರಾಯಕ್ಕೆ ಬರಲಾಗಿದೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ   

ವೆಬ್ದುನಿಯಾವನ್ನು ಓದಿ