ಅತಿಸಾರ ವಾಂತಿ ಇದ್ದಾಗ ತಪ್ಪದೇ ಇದನ್ನು ಸೇವಿಸಿ, ಇಲ್ಲವಾದರೆ ಮೂತ್ರಪಿಂಡ ವಿಫಲವಾಗಬಹುದು ಎಚ್ಚರ

ಶುಕ್ರವಾರ, 9 ಏಪ್ರಿಲ್ 2021 (06:32 IST)
ಬೆಂಗಳೂರು : ತಿಂದ ಆಹಾರದಲ್ಲಿ ವ್ಯತ್ಯಾಸವಾದಾಗ ಅತಿಸಾರ ವಾಂತಿ ಉಂಟಾಗುತ್ತದೆ. ಇದರಿಂದ ದೇಹದ ದುರ್ಬಲವಾಗಿ ತಲೆ ತಿರುಗುವಿಕೆ, ಮೂರ್ಛೆ ಹೋಗುವ ಸಮಸ್ಯೆ ಕಾಡುತ್ತದೆ. ಹಾಗಾಗಿ ಅತಿಸಾರ, ವಾಂತಿ ಇದ್ದಾಗ ನೀವು ತಪ್ಪದೇ ಇದನ್ನು ಸೇವಿಸುತ್ತೀರಿ.

ಅತಿಸಾರ, ವಾಂತಿಯು ದೇಹದಲ್ಲಿ ಸೋಡಿಯಂ, ಪೊಟ್ಯಾಶಿಯಂ, ಮೆಗ್ನಿಸಿಯಂ ಕೊರತೆಯನ್ನುಂಟು ಮಾಡುತ್ತದೆ. ಇದು ಕೈಕಾಲು ನೋವು ಮತ್ತು ಕರುಳಿನ ಚಲನೆ ಮತ್ತು ಹೃದಯಬಡಿತವನ್ನು ಕಡಿಮೆ ಮಾಡುತ್ತದೆ. ಇದರಿಂದ ತಲೆತಿರುಗುವಿಕೆ, ಮೂರ್ಛೆ ಹೋಗುವ ಸಮಸ್ಯೆ ಕಾಡುತ್ತದೆ.

ಹಾಗಾಗಿ ವಾಂತಿ ಅತಿಸಾರ ಸಂಭವಿಸಿದಾಗ ಸಿಟ್ರಸ್ ಹಣ‍್ಣುಗಳನ್ನು ಹೆಚ್ಚಾಗಿ ಸೇವಿಸಿ. ನಿಂಬೆ ಪಾನಕ, ಉಪ್ಪು ಸಕ್ಕರೆ ಪಾಕವನ್ನು ತಯಾರಿಸಿ ಸೇವಿಸಿ. ಸಾಕಷ್ಟು ನೀರನ್ನು ಕುಡಿಯಿರಿ. ಖನಿಜ ಕೊರತೆಯನ್ನು ನೀಗಿಸಲು ಕಿತ್ತಳೆ, ಬಾಳೆಹಣ‍್ಣು, ನಿಂಬೆಯನ್ನು ಸೇವಿಸಬೇಕು. ಒಂದು ವೇಳೆ ನೀವು ಈ ಖನಿಜಾಂಶಗಳನ್ನು ಪೂರೈಸದಿದ್ದರೆ ಮೂತ್ರಪಿಂಡಗಳು ವಿಫಲವಾಗಬಹುದು.  

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ