ಬಾಳೆ ಹಣ್ಣಿನ ಸಿಪ್ಪೆಯಲ್ಲಿ ವಿಟಮಿನ್ ಇದೆಯಂತೆ ನಿಜವೇ?

ಶನಿವಾರ, 4 ಫೆಬ್ರವರಿ 2017 (08:13 IST)
ಬೆಂಗಳೂರು: ಬಾಳೆ ಹಣ್ಣು ತಿಂದ ಮೇಲೆ ಅದರ ಸಿಪ್ಪೆಯನ್ನು ಪಕ್ಕಕ್ಕೆಸೆಯುತ್ತೇವೆ. ನಾವು ಸೇವಿಸುವ ಹೆಚ್ಚಿನ ಆಹಾರ ವಸ್ತುಗಳಲ್ಲೂ ಹಾಗೆಯೇ. ಬೇಡವೆಂದು ಬಿಸಾಕುವ ಸಿಪ್ಪೆಯಲ್ಲೇ ವಿಟಮಿನ್ ಇರುತ್ತದೆ. ಬಾಳೆ ಹಣ್ಣಿನ ಸಿಪ್ಪೆಯಲ್ಲೂ ಹಾಗೆಯೇ.

 
ಇದರ ಸಿಪ್ಪೆಯ ಒಳಭಾಗದಲ್ಲಿ ನಾರಿನಂತಹ ಭಾಗವಿರುತ್ತದೆ. ಅದು ಹೃದಯದ ಸ್ನಾಯುಗಳಿಗೆ ಹೆಚ್ಚು ಬಲ ಒದಗಿಸುವುದರ ಮೂಲಕ ಹೃದಯದ ಆರೋಗ್ಯ ಕಾಪಾಡುತ್ತದೆ. ಸಿಪ್ಪೆಯ ಒಳ ಭಾಗದ ಪೇಸ್ಟ್ ನಂತಹ ಪದರ ಸೊಳ್ಳೆ ಕಚ್ಚಿ ಗಾಯವಾಗುವುದಕ್ಕೂ ಮಸಾಜ್ ಮಾಡಿಕೊಂಡರೆ ಒಳ್ಳೆಯದು.

ಇದೆಲ್ಲಾ ಬಿಡಿ. ತೆಂಗಿನ ಕಾಯಿಯ ತಿರುಳಿನ ಹೊರಭಾಗದಲ್ಲಿ ಕಂದು ಬಣ್ಣದ ಭಾಗವಿರುತ್ತದಲ್ಲಾ? ಅಲ್ಲಿ ಹೇರಳವಾದ ವಿಟಮಿನ್ ಇರುತ್ತದೆ. ಇದನ್ನು ಸೇವಿಸುವುದು ನಮ್ಮ ಆರೋಗ್ಯಕ್ಕೆ ಉತ್ತಮ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ