ಥಟ್ ಅಂತ ತಟ್ಟೆ ಖಾಲಿ ಮಾಡುವವರೇ ಹುಷಾರ್!

ಶುಕ್ರವಾರ, 17 ನವೆಂಬರ್ 2017 (08:27 IST)
ಬೆಂಗಳೂರು: ಕೆಲವರಿಗೆ ತಟ್ಟೆಯಲ್ಲಿ ತಿಂಡಿ ಇಟ್ಟ ಮರುಕ್ಷಣದಲ್ಲಿ ಅದು ಖಾಲಿಯಾಗಿರುತ್ತದೆ. ಈ ರೀತಿ ಥಟ್ ಅಂತ ಕೊಟ್ಟ ತಿಂಡಿಯನ್ನು ಅವಸರ ಅವಸರವಾಗಿ ತಿನ್ನುವುದರಿಂದ ನಿಮ್ಮ ಆರೋಗ್ಯದ ಮೇಲೆ ಗಂಭೀರ ಪರಿಣಾಮವಾಗುತ್ತದೆ ಎಂದು ವರದಿಯೊಂದು ತಿಳಿಸಿದೆ.

 
ಇತ್ತೀಚೆಗೆ ಹೊರಬಂದ ಸಂಶೋಧನಾ ವರದಿಯೊಂದರ ಪ್ರಕಾರ, ಹೀಗೆ ಅವಸರವಾಗಿ ತಿನ್ನುವುದರಿಂದ ಹೃದಯ ಖಾಯಿಲೆ, ಪಕ್ಷಪಾತ ಮತ್ತು ಮಧುಮೇಹದಂತಹ ರೋಗ ಬರುವ ಸಾಧ್ಯತೆ ಹೆಚ್ಚು ಎಂದು ತಿಳಿದು ಬಂದಿದೆ.

ನಿಧಾನವಾಗಿ ಆಹಾರವನ್ನು ಜಗಿದು ಸೇವಿಸುವುದರಿಂದ ನಿಮ್ಮ ಹೃದಯ ಮತ್ತು ದೇಹದ ಆರೋಗ್ಯ ಉತ್ತಮವಾಗಿರುತ್ತದೆ ಎಂದು ಅಮೆರಿಕನ್ ಹಾರ್ಟ್ ಅಸೋಸಿಯೇಷನ್ ನಡೆಸಿದ ಸಂಶೋಧನೆ ತಿಳಿಸಿದೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ