ಹೆಚ್ಚು ಮಿಲನ ಕ್ರಿಯೆ ಮಾಡುವುದರ ಪರಿಣಾಮ ಹೀಗಾಗುತ್ತದೆ ನೋಡಿ!

ಬುಧವಾರ, 5 ಸೆಪ್ಟಂಬರ್ 2018 (09:39 IST)
ಬೆಂಗಳೂರು: ಲೈಂಗಿಕ ಕ್ರಿಯೆ ಮಾಡಿದಷ್ಟೂ ನಮ್ಮ ಆರೋಗ್ಯ ಚೆನ್ನಾಗಿರುತ್ತದೆ ಎಂದು ನಾವು ಈಗಾಗಲೇ ಹಲವು ಅಧ್ಯಯನಗಳಿಂದ ತಿಳಿದಿದ್ದೇವೆ. ಹೆಚ್ಚು ಸೆಕ್ಸ್ ಮಾಡಿದಷ್ಟು ನಮ್ಮ ಸಂಬಂಧದಲ್ಲಿ ಏನೆಲ್ಲಾ ಬದಲಾವಣೆಯಾಗುತ್ತದೆ ನೋಡಿ.

ಇನ್ನೂ ಹತ್ತಿರ
ಮಿಲನ ಕ್ರಿಯೆ ನಿಯಮಿತವಾಗಿ, ಹೆಚ್ಚು ಮಾಡಿದಷ್ಟು ಪತಿ-ಪತ್ನಿಯರ ಸಂಬಂಧ ನಿಕಟವಾಗುತ್ತದೆ. ಅಂತಹ ದಂಪತಿ ಭಾವನಾತ್ಮಕವಾಗಿ ಹೆಚ್ಚು ನಿಕಟವಾಗುತ್ತಾರೆ.

ಒತ್ತಡಗಳು ದೂರ
ಮಾನಸಿಕ ಒತ್ತಡಕ್ಕೆ ಪ್ರೀತಿಯೇ ಮದ್ದು. ರೊಮ್ಯಾನ್ಸ್ ಹೆಚ್ಚು ಮಾಡಿದಷ್ಟು ಬಾಹ್ಯ ಒತ್ತಡಗಳನ್ನು, ಮಾನಸಿಕ ತುಮುಲಗಳನ್ನು ಮರೆಯುವಿರಿ.

ಫಿಟ್ನೆಸ್
ಲೈಂಗಿಕ ಕ್ರಿಯೆ ಎನ್ನುವುದು ಒಂದು ರೀತಿಯ ದೈಹಿಕ ವ್ಯಾಯಾಮವಿದ್ದಂತೆ. ಹೆಚ್ಚು ಮಿಲನ ಕ್ರಿಯೆ ನಡೆಸಿದಷ್ಟು ನಿಮ್ಮ ದೇಹಕ್ಕೂ ಚಟುವಟಿಕೆ ಹೆಚ್ಚು ಸಿಕ್ಕು, ಸದೃಢರಾಗುತ್ತೀರಿ!

ಆತ್ಮವಿಶ್ವಾಸ
ಒಬ್ಬರಿಗೊಬ್ಬರು ದೈಹಿಕವಾಗಿ, ಮಾನಸಿಕವಾಗಿ ಹತ್ತಿರವಾಗುವುದರಿಂದ ಆತ್ಮವಿಶ್ವಾಸ ಹೆಚ್ಚುವುದು. ಹಾಗಾಗಿ ಆರೋಗ್ಯ ತಜ್ಞರ ಪ್ರಕಾರ ಲೈಂಗಿಕ ಕ್ರಿಯೆ ಎನ್ನುವುದು ಕಾನ್ಫಿಡೆನ್ಸ್ ಬೂಸ್ಟರ್ ಇದ್ದಂತೆ!

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.     

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ