ನಿಮ್ಮ ಮನೆಯಲ್ಲಿ ಉಪ್ಪು ಇದೆಯಾ...? ಹಾಗಾದ್ರೆ ಅದನ್ನು ಬಳಸಿ ಹೀಗೆಲ್ಲಾ ಮಾಡಿ!

ಮಂಗಳವಾರ, 13 ಮಾರ್ಚ್ 2018 (09:11 IST)
ಬೆಂಗಳೂರು: ಉಪ್ಪಿನಿಂದ ಅಡುಗೆ ರುಚಿ ಮಾತ್ರ ಹೆಚ್ಚುವುದಲ್ಲ. ಉಪ್ಪನ್ನು ಆರೋಗ್ಯದ ದೃಷ್ಟಿಯಿಂದಲೂ ನಾನಾ ಬಗೆಯಲ್ಲಿ ಸಹಕಾರಿ. ಪಾತ್ರೆಯನ್ನು ಫಳ ಫಳ ಹೊಳೆಯುವಂತೆ ಮಾಡಲು ಉಪ್ಪು ಸಹಾಯಮಾಡುತ್ತದೆ.


ಹೊಳಪು ಕಳೆದುಕೊಂಡ ತಾಮ್ರದ ಪಾತ್ರೆಯನ್ನು ಹುಣಸೇಹುಳಿ ಹಾಗೂ ಉಪ್ಪು ಬೆರೆಸಿ ಪಾತ್ರೆ ತಿಕ್ಕಿದರೆ ಹೊಳೆಯುತ್ತದೆ.
ಉಪ್ಪನ್ನು  ವಿನೆಗರ್ ಜತೆ ಬಳಸಿ ತಿಕ್ಕಿದರೆ ಪಾತ್ರೆಗಳಲ್ಲಿ ಶೈನಿಂಗ್ ಹೆಚ್ಚುತ್ತದೆ.
ಪಾತ್ರೆ ತೊಳೆಯುವ ಸ್ಪಾಂಜುಗಳು ತುಂಬಾ ಎರಡು ಕಪ್ ನೀರಿಗೆ ಮುಕ್ಕಾಲು ಕಪ್‌ನಷ್ಟು ಉಪ್ಪು ಹಾಕಿ. ಈ ದ್ರಾವಣದಲ್ಲಿ ಸ್ಪಾಂಜನ್ನು ಇಡೀ ರಾತ್ರಿ ನೆನೆಸಿಡಿ. ಮರುದಿನ ಬೆಳಿಗ್ಗೆ ಈ ಸ್ಪಾಂಜ್ ಸ್ವಚ್ಛವಾಗಿರುತ್ತದೆ.


ತರಕಾರಿಗಳನ್ನು ಕತ್ತರಿಸುವ ವುಡ್ ಕಟ್ಟರ್ ಕೊಳೆಯಾಗಿದ್ದರೆ ಸ್ವಲ್ಪ ಬಿಸಿ ನೀರಿಗೆ ಸ್ವಲ್ಪ ಉಪ್ಪು ಮತ್ತು ನಿಂಬೆ ರಸವನ್ನು ಬೆರೆಸಿ. ಈ ದ್ರಾವಣದಿಂದ ವುಡ್ ಕಟ್ಟರ್‌ನ ಮೇಲ್ಮೈಯನ್ನು ತೊಳೆಯಿರಿ. ಇದರಿಂದ ಕಟ್ಟರ್ ಸ್ವಚ್ಛವಾಗುತ್ತದೆ ಮತ್ತು ಅದರಲ್ಲಿ ಕೀಟಾಣುಗಳು ಬೆಳೆಯುವುದಿಲ್ಲ.
 


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ