ಕೊಲೆಸ್ಟ್ರಾಲ್ ಸಮಸ್ಯೆನಾ..? ಹಾಗಾದ್ರೆ ಈ ಆಹಾರಗಳನ್ನು ಸೇವಿಸಿ.

ಸೋಮವಾರ, 5 ಜೂನ್ 2017 (18:27 IST)
ನಮ್ಮದೆಹದಲ್ಲಿ ಒಳ್ಳೆಯ ಕೊಲೆಸ್ಟ್ರಾಲ್ ಹಾಗೂ ಬೇಡದ ಕೊಲೆಸ್ಟ್ರಾಲ್ ಎಂದು ಎರಡು ವಿಧವಿರುತ್ತದೆ. ದೇಹಕ್ಕೆ ಅಗತ್ಯವಿರುವ ಕೊಲೆಸ್ಟ್ರಾಲ್ ಹಾರ್ಮೋನ್‍ಗಳ ಉತ್ಪಾದನೆಗೆ, ಜೀರ್ಣಕ್ರಿಯೆಗೆ, ವಿಟಮಿನ್-ಡಿಯ ಉತ್ಪಾದನೆಗೆ ಸಹಾಯ ಮಾಡುತ್ತದೆ. ದೇಹಕ್ಕೆ ಬೇಡದ ಕೊಲೆಸ್ಟ್ರಾಲ್ ಅನಗತ್ಯವಾದ ಕೊಬ್ಬಿನಂಶವನ್ನು ಹೆಚ್ಚಿಸುತ್ತದೆ. ಹೃಡಯಾಘಾತ, ರಕ್ತ ಹೆಪ್ಪುಗಟ್ಟುವಿಕೆಯಂತಹ ಸಮಸ್ಯೆಗಳಿಗೆ ಕಾರಣವಾಗುತ್ತದೆ.  ಹಾಗಾಗಿ ನಾವು ಸೇವಿಸುವ ಆಹಾರದ ಕ್ರಮದ ಬಗ್ಗೆ ಸ್ವಲ್ಪ ಎಚ್ಚರಿಕೆ ವಹಿಸಿದರೆ ಈ ಕೊಲೆಸ್ಟ್ರಾಲ್ ಸಮಸ್ಯೆಯನ್ನು ಕಡಿಮೆಮಾಡಿಕೊಳ್ಳಬಹುದು.
 
ಅಂತಹ ಕೆಲ ಸುಲಭ ಆಹಾರಗಳ ಬಗ್ಗೆ ಇಲ್ಲಿ ಮಾಹಿತಿ ಇದೆ. ಅವುಗಳೆಮ್ದರೆ ಬೆಣ್ಣೆಹಣ್ಣು ಅಥವಾ ಬಟರ್ ಫ್ರ್ಯೂಟ್, ಬೀನ್ಸ್, ಸೋಯಾಬಿನ್, ಬೆಳ್ಳುಳ್ಳಿ, ಟೊಮೆಟೊ 
 
* ಬೆಣ್ಣೆ ಹಣ್ಣು ಕೊಲೆಸ್ಟ್ರಾಲ್ ಕಡಿಮೆ ಮಾಡುವುದರಲ್ಲಿ ಬೆಣ್ಣೆ ಹಣ್ಣು ತುಂಬಾ ಪ್ರಯೋಜನಕಾರಿ. ಇದರಲ್ಲಿ ಬೀಟಾ ಸೈಟೊಸ್ಟಿರೋಲ್ ಇದ್ದು ಕೊಲೆಸ್ಟ್ರಾಲ್ ಕಡಿಮೆ ಮಾಡುತ್ತದೆ. 
 
* ಬೀನ್ಸ್ ನಲ್ಲಿ ತಿನ್ನಬಹುದಾದ ನಾರಿನಂಶವಿದ್ದು ಇದು ಕೊಲೆಸ್ಟ್ರಾಲ್ ಅನ್ನು ಕಡಿಮೆ ಮಾಡುವಲ್ಲಿ ತುಂಬಾ ಸಹಕಾರಿಯಾಗಿದೆ. ಇದು ಹೃದಯದ ಆರೋಗ್ಯಕ್ಕೂ ಒಳ್ಳೆಯದು.
 
* ಸೋಯಾಬೀನ್ ನಲ್ಲಿರುವ ಪ್ರೊಟೀನ್ ಆರೋಗ್ಯಕ್ಕೆ ತುಂಬಾ ಒಳ್ಳೆಯದು, ಅಲ್ಲದೆ ಇದು ಕೆಟ್ಟ ಕೊಲೆಸ್ಟ್ರಾಲ್ ಅನ್ನು ಕಡಿಮೆ ಮಾಡುವಲ್ಲಿ ತುಂಬಾ ಸಹಕಾರಿಯಾಗಿದೆ.
 
* ಟೊಮೆಟೊದಲ್ಲಿ ಲೈಕೋಪೆನೆ, ಚಿಟಮಿನ್ ಸಿ ಮತ್ತು ನಾರಿನಂಶವಿದ್ದು ಕೆಟ್ಟ ಕೊಲೆಸ್ಟ್ರಾಲ್ ಅನ್ನು ಕಡಿಮೆ ಮಾಡುವ ಸಾಮರ್ಥ್ಯವನ್ನು ಹೊಂದಿದೆ.
 
* ಪ್ರತಿ ದಿನ 2-3 ಎಸಳು ಬೆಳ್ಳುಳ್ಳಿ ತಿಂದರೆ ಕೊಲೆಸ್ಟ್ರಾಲ್ ಕಡಿಮೆ ಮಾಡಬಹುದು ಹಾಗೂ ಹೃದಯ ಸ್ವಾಸ್ಥ್ಯಕ್ಕೆ ಉತ್ತಮ. ಇದು ದೇಹದ ಬೊಜ್ಜನ್ನು ಕರಗಿಸುವಲ್ಲಿ ಕೂಡ ಸಹಕಾರಿಯಾಗಿದೆ.
 

ವೆಬ್ದುನಿಯಾವನ್ನು ಓದಿ