ವಸಡಿನಲ್ಲಿ ರಕ್ತ ಬರುತ್ತಿದೆಯೇ? ಈ ಆಹಾರ ಸೇವಿಸಿ!

ಭಾನುವಾರ, 30 ಏಪ್ರಿಲ್ 2017 (07:35 IST)
ಬೆಂಗಳೂರು: ಹಲ್ಲಿನ ಆರೋಗ್ಯ ಬಹಳ ಮುಖ್ಯ. ವಸಡಿನ ಸಮಸ್ಯೆ ಹಲವರಿಗೆ ಕಿರಿ ಕಿರಿ ಉಂಟು ಮಾಡುತ್ತಿರುತ್ತದೆ. ವಸಡಿನಲ್ಲಿ ರಕ್ತ ಸೋರುವ ಸಮಸ್ಯೆಗೆ ಆಹಾರದಲ್ಲೇ ಪರಿಹಾರವಿದೆ. ಅದು ಯಾವುದು ನೋಡೋಣ.

 
ವಿಟಮಿನ್ ಸಿ ಆಹಾರಗಳು
ವಿಟಮಿನ್ ಸಿ ಅಂಶ ಹೊಂದಿರುವ ಆಹಾರ ಪದಾರ್ಥಗಳನ್ನು ಸಾಕಷ್ಟು ಸೇವಿಸಬೇಕು. ಕಿತ್ತಳೆ, ನಿಂಬೆ ಹಣ್ಣು ಹೆಚ್ಚು ಸೇವಿಸಿದರೆ ವಸಡುಗಳು ಶಕ್ತಿಶಾಲಿಯಾಗುತ್ತವೆ.

ಹಾಲು
ಹಲ್ಲಿನ ಬೆಳವಣಿಗೆಗೆ ಬೇಕಾದುದು ಕ್ಯಾಲ್ಶಿಯಂ ಅಂಶ. ಕ್ಯಾಲ್ಶಿಯಂ ಅಂಶ ಹೆಚ್ಚಿರುವ ಪದಾರ್ಥವೆಂದರೆ ಹಾಲು. ಹಾಗಾಗಿ ಹಾಲು ಯಥೇಚ್ಛವಾಗಿ ಸೇವಿಸಿ.

ಹಸಿ ತರಕಾರಿಗಳು
ವಸಡಿನಲ್ಲಿ ರಕ್ತ ಸಂಚಾರ ಸುಗಮವಾಗಿ ಆಗಬೇಕೆಂದರೆ, ಸಾಕಷ್ಟು ಹಸಿ ತರಕಾರಿಗಳನ್ನು ಸೇವಿಸಬೇಕು.

ಇಷ್ಟೇ ಅಲ್ಲದೆ ವಿಟಮಿನ್ ಎ ಅಂಶ ಕಡಿಮೆಯಾದರೂ ವಸಡಿನಲ್ಲಿ ರಕ್ತ ಸ್ರಾವವಾಗಬಹುದು. ಅದಕ್ಕಾಗಿ ವಿಟಮಿನ್ ಎ ಅಧಿಕವಿರುವ ಕ್ಯಾರೆಟ್, ಪಾಲಕ್ ಸೊಪ್ಪುಗಳನ್ನು ಯಥೇಚ್ಛವಾಗಿ ಬಳಸಿ ವಸಡಿನ ಆರೋಗ್ಯ ಕಾಪಾಡಿ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ   

ವೆಬ್ದುನಿಯಾವನ್ನು ಓದಿ