‘ಆತಂಕ’ಕ್ಕೊಳಗಾಗಿದ್ದೀರಾ? ಹಾಗಿದ್ದರೆ ಈ ಸಿಂಪಲ್ ಟ್ರಿಕ್ ಮಾಡಿ

ಮಂಗಳವಾರ, 27 ಸೆಪ್ಟಂಬರ್ 2022 (08:30 IST)
ಬೆಂಗಳೂರು: ಆತಂಕ ಅಥವಾ ಆಂಕ್ಸೈಟಿ ಎನ್ನುವುದು ಬಹುತೇಕರಿಗೆ ಕಾಡುವ ಮಾನಸಿಕ ಸಮಸ್ಯೆ. ಕೆಲವರಲ್ಲಿ ಇದು ಅತಿಯಾಗಿ ದೈನಂದಿನ ಸಹಜ ಜೀವನದ ಮೇಲೆ ಪರಿಣಾಮ ಬೀರಬಹುದು.

ಆತಂಕದಿಂದ ಬಳಲುತ್ತಿದ್ದರೆ ಭಯ, ನಿದ್ರಾಹೀನತೆ, ನಿರಾಸಕ್ತಿ, ಹಸಿವು ಇತ್ಯಾದಿಗಳ ಮೇಲೆ ಪರಿಣಾಮ ಬೀರುವುದು ಸಹಜ.
ಆತಂಕವಾದಾಗ ನಮ್ಮ ಉಸಿರಾಟ ಪ್ರಕ್ರಿಯೆಯಲ್ಲಿ ಏರುಪೇರಾಗಬಹುದು.

ಹೀಗಾಗಿ ಆತಂಕದಿಂದ ಬಳಲುತ್ತಿದ್ದರೆ ಸುಲಭವಾಗಿ ನಾವು ಮಾಡಬಹುದಾದ ಪರಿಹಾರವೆಂದರೆ ಉಸಿರಾಟದ ವ್ಯಾಯಾಮ ಮಾಡುವುದು. ನಾಲ್ಕು ಸೆಕೆಂಡುಗಳ ಕಾಲ ಉಸಿರನ್ನು ಒಳಗೆ ಎಳೆದುಕೊಂಡು ಮತ್ತೆ ನಾಲ್ಕು ಸೆಕೆಂಡುಗಳ ಕಾಲ ಉಸಿರುಬಗಿದಿಟ್ಟುಕೊಂಡು ಮತ್ತೆ ನಾಲ್ಕು ಸೆಕೆಂಡುಗಳ ಕಾಲ ಹೊರಗೆ ಬಿಡಿ. ಇದೇ ರೀತಿ ಕೆಲವಾರು ಬಾರಿ ಮಾಡುವುದರಿಂದ ನಮ್ಮ ಮನಸ್ಸು ಶಾಂತವಾಗುತ್ತದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ