ಬೆಂಗಳೂರು : ಮಾವಿನ ಎಲೆಗಳನ್ನು ಹೆಚ್ಚಾಗಿ ಮನೆಗೆ ತೋರಣ ಕಟ್ಟಲು ಬಳಸುತ್ತಾರೆ. ಆದರೆ ಮಾವಿನ ಎಲೆಗಳನ್ನು ಸೇವಿಸುವುದರಿಂದ ಮಧುಮೇಹ ಸಮಸ್ಯೆಯನ್ನು ನಿಯಂತ್ರಣದಲ್ಲಿಡಬಹುದಂತೆ.
ಮಾವಿನ ಎಲೆಗಳಲ್ಲಿರುವ ಸಾರ ಗ್ಲೂಕೋಸ್ ನ್ನು ಹೀರಿಕೊಳ್ಳುತ್ತದೆ. ಇದು ಅಂತಿಮವಾಗಿ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಕಡಿಮೆ ಮಾಡುತ್ತದೆ. ಇದು ನಿಮ್ಮ ದೇಹದಲ್ಲಿನ ಇನ್ಸುಲಿನ್ ಉತ್ಪಾದನೆಯನ್ನು ಸುಧಾರಿಸುತ್ತದೆ. ಇದು ಆಗಾಗ ಮೂತ್ರ ವಿಸರ್ಜನೆ , ದೃಷ್ಟಿ ಮಂದವಾಗುವುದು ಮತ್ತು ಅತಿಯಾದ ತೂಕ ನಷ್ಟ ಸಮಸ್ಯೆಯನ್ನು ಕಡಿಮೆ ಮಾಡುತ್ತದೆ.
ಸುಮಾರು 15 ತಾಜಾ ಮಾವಿನ ಎಲೆಗಳನ್ನು 100ರಿಂದ 150 ಮಿಲಿ ನೀರಿನಲ್ಲಿ ಕುದಿಸಿ ರಾತ್ರಿಯಿಡಿ ಬಿಟ್ಟು ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಸೇವಿಸಿ. ಹೀಗೆ ಮೂರು ತಿಂಗಳು ಮಾಡಿದರೆ ಇದರಿಂದ ಉತ್ತಮ ಫಲಿತಾಂಶ ಸಿಗುತ್ತದೆ.