ಈ ವಯಸ್ಸಿನಲ್ಲಿ ಮಕ್ಕಳ ಮಾಡಿಕೊಳ್ಳಬಹುದೇ?

ಸೋಮವಾರ, 19 ಆಗಸ್ಟ್ 2019 (08:54 IST)
ಬೆಂಗಳೂರು: ಕೆಲವೊಮ್ಮೆ ಅನಿವಾರ್ಯ ಕಾರಣಗಳಿಂದಾಗಿ ಸೂಕ್ತ ವಯಸ್ಸಿನಲ್ಲಿ ಮಕ್ಕಳನ್ನು ಮಾಡಿಕೊಳ್ಳಲು ಸಾಧ್ಯವಾಗದೇ ಹೋಗುತ್ತದೆ.


ಅಥವಾ ಒಂದು ಮಗುವಾದ ಮೇಲೆ ಇನ್ನೊಂದು ಮಗು ಮಾಡಿಕೊಳ್ಳಲು ಮನಸ್ಸು ಮಾಡುವಾಗ ವಯಸ್ಸು 40 ದಾಟಿರುತ್ತದೆ. ಈ ವಯಸ್ಸಿನಲ್ಲಿ ಗರ್ಭಿಣಿಯಾದರೆ ಅಪಾಯವೇ ಎಂಬ ಅನುಮಾನವೂ ಜತೆಗೇ ಬರುತ್ತದೆ. ಹಾಗಿದ್ದರೆ 40 ದಾಟಿದ ಮೇಲೆ ಮಹಿಳೆಯರು ಗರ್ಭಿಣಿಯಾದರೆ ಕಷ್ಟವಾಗಬಹುದೇ?

ಸಾಮಾನ್ಯವಾಗಿ ಮಗುವಿಗೆ ಉತ್ತಮ ಜೀನ್ ಸಿಗಬೇಕು ಎಂದರೆ 35 ವರ್ಷದೊಳಗೇ ಮಕ್ಕಳನ್ನು ಮಾಡಿಕೊಳ್ಳುವುದು ಸೂಕ್ತ. ಈ ವಯಸ್ಸಿನಲ್ಲಿ ಮಗುವಾದರೆ, ತಾಯಿ-ಮಗು ಇಬ್ಬರೂ ಆರೋಗ್ಯವಾಗಿರುತ್ತದೆ. ಅನಿವಾರ್ಯ ಕಾರಣಗಳಿಂದ 40 ದಾಟಿದ ಮೇಲೆ ಗರ್ಭಿಣಿಯಾಗಲು ಬಯಸಿದರೆ ಅದಕ್ಕೆ ಸೂಕ್ತ ವೈದ್ಯರ ಸಲಹೆ ಪಡೆಯುವುದು ಉತ್ತಮ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ