ಆತ್ಮರತಿ ಮಾಡುವುದರಿಂದ ಮಹಿಳೆಯರ ಗುಪ್ತಾಂಗ ಸಡಿಲವಾಗುತ್ತಾ?
ಸೋಮವಾರ, 2 ಮಾರ್ಚ್ 2020 (08:56 IST)
ಬೆಂಗಳೂರು: ನಾನು 18 ವರ್ಷದ ಯುವತಿ. ತಿಂಗಳಿಗೆ ನಾಲ್ಕು ಬಾರಿ ಹಸ್ತಮೈಥುನ ಮಾಡಿಕೊಳ್ಳುತ್ತೇನೆ. ಇದು ಸಹಜವೇ? ಮತ್ತು ಹಸ್ತಮೈಥುನ ಮಾಡಿಕೊಳ್ಳುವುದರಿಂದ ಗುಪ್ತಾಂಗ ಸಡಿಲವಾಗುತ್ತದೆಯೇ?
ಲೈಂಗಿಕವಾಗಿ ತೀರಾ ಉದ್ರೇಕವಾದಾಗ ಈ ವಯಸ್ಸಿನಲ್ಲಿ ಆತ್ಮರತಿ ಮಾಡಿಕೊಳ್ಳುವದರಲ್ಲಿ ತಪ್ಪಿಲ್ಲ. ಆದರೆ ಅದನ್ನೇ ಚಟವಾಗಿಸಿದರೆ ಬೇರೆ ಕಡೆ ಗಮನ ಕಡಿಮೆಯಾಗಬಹುದಷ್ಟೇ. ಹಸ್ತಮೈಥುನ ಆರೋಗ್ಯಕರ ಚಟುವಟಿಕೆ. ಇದರಿಂದ ಗುಪ್ತಾಂಗ ಸಡಿಲವಾಗದು. ಒಂದು ವೇಳೆ ನಿಮ್ಮ ಗುಪ್ತಾಂಗ ಸಡಿಲವಾಗಿದೆ ಎಂಬ ಭಾವನೆ ನಿಮಗಿದ್ದರೆ ಆ ಭಾಗಕ್ಕೆ ಚಟುವಟಿಕೆ ಕೊಡುವ ವ್ಯಾಯಾಮ ಮಾಡಿ.