ಬೇರೊಬ್ಬನ ಲವ್ ಮಾಡಿದ್ರೂ ನಾನಿನ್ನೂ ಕನ್ಯೆ ಅಂತಿರೋಳನ್ನು ಮದುವೆಯಾಗಲೇ?

ಬುಧವಾರ, 27 ನವೆಂಬರ್ 2019 (14:00 IST)
ಪ್ರಶ್ನೆ: ನನಗೆ ಮದುವೆಗಾಗಿ ಹುಡುಗಿಯನ್ನು ಗೊತ್ತು ಮಾಡಿದ್ದಾರೆ. ಅವಳು ಮೊದಲೇ ಬೇರೋಬ್ಬನನ್ನು ಪ್ರೀತಿ ಮಾಡುತ್ತಿದ್ದಳು ಎನ್ನುವ ವಿಷಯ ಗೊತ್ತಾಗಿದೆ. ಈಗಿನ ಬಹುತೇಕ ಹುಡುಗಿಯರು ಪ್ರೀತಿ ಮಾಡಿದರೆ ಆ ಬಳಿಕ ಆ ಸುಖ ಕೂಡ ಪಡೆದುಕೊಂಡಿರುತ್ತಾರೆ ಅಂತ ನನ್ನ ಗೆಳೆಯರು ಹೇಳುತ್ತಿದ್ದಾರೆ.


ಹಾಗಾದರೆ ನಾನು ಮದುವೆಯಾಗೋ ಹುಡುಗಿ ಕೂಡ ಬೇರೊಬ್ಬನೊಂದಿಗೆ ಲೈಂಗಿಕ ಕ್ರಿಯೆ ನಡೆಸಿರಬಹುದಾ? ಎರಡು ವರ್ಷ ಬೇರೆಯವನ ಜತೆ ಲವ್ ಮಾಡಿ ಈಗ ನನ್ ಜೊತೆ ಮದುವೆಯಾಗುತ್ತಿದ್ದಾಳೆ. ಅವಳನ್ನು ಕೇಳಿದರೆ ನಾನಿನ್ನೂ ಪವಿತ್ರವಾಗಿದ್ದೇನೆ ಅಂತಿದ್ದಾಳೆ. ಆದರೆ ನನಗೆ ನಂಬೋಕೆ ಆಗುತ್ತಿಲ್ಲ. ಮಾಡೋದೇನು?

ಉತ್ತರ: ಮದುವೆ, ಪ್ರೀತಿ ಅನ್ನೋದು ನಂಬಿಕೆ  ಮೇಲೆ ನಿಂತಿರಬೇಕು. ನೀವು ನಿಮ್ಮ ಯುವತಿ ಬೇರೆಯವನ ಜತೆಗೆ ಸೇರಿ ಅಪವಿತ್ರಳಾಗಿದ್ದಾಳೆ ಅಂತ ಅನುಮಾನ ಪಡೋದು ತಪ್ಪು.

ನಿಮಗೆ ಆ ಕುರಿತು ದಾಖಲೆಗಳು, ಫೋಟೋ, ವಿಡಿಯೋಗಳು ಸಿಕ್ಕಲ್ಲಿ ಮಾತ್ರ ನೀವು ಅವಳ ಚಾರಿತ್ರ್ಯದ ಕುರಿತು ಅಪಾದನೆ ಮಾಡಬಹುದು. ಸುಖಾಸುಮ್ಮನೆ ಆರೋಪ ಮಾಡೋದು ಸರಿಯಲ್ಲ. ನಿಮಗೆ ಅವಳು ಇಷ್ಟವೇ ಆಗಿರದಿದ್ದರೆ ನಿಮ್ಮಷ್ಟಕ್ಕೆ ನೇರವಾಗಿ ಹೇಳಿ ಮದುವೆ ಕ್ಯಾನ್ಸಲ್ ಮಾಡಿಕೊಳ್ಳಿ. ಅನುಮಾನ ಇಟ್ಟುಕೊಂಡು ಅವಳೊಂದಿಗೆ ಜೀವನ ನಡೆಸೋದು ಸುಲಭವಲ್ಲ.




ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ