ಟೆನ್ಶನ್ ಫ್ರೀ ಮಾಡಿಕೊಂಡು ಹಾಸಿಗೆ ಸುಖ ಪಡೆದುಕೊಳ್ಳಿ

ಸೋಮವಾರ, 6 ಜನವರಿ 2020 (14:57 IST)
ಯುವತಿಯರಿಗೆ, ಮಹಿಳೆಯರಿಗೆ ರಾತ್ರಿ ಹಾಸಿಗೆ ಸುಖ ನೀಡೋವಾಗ ಕೆಲವು ತೊಂದರೆಗಳು ಕಾಡುತ್ತಲೇ ಇರುತ್ತವೆ.

ಮಹಿಳೆಯರಿಗೆ ಕೆಲಸ ಕಳೆದುಕೊಳ್ಳುವ ಭಯ, ಹಣಕಾಸಿನ ತೊಂದರೆಗಳು, ಟಾರ್ಗೆಟ್ಟುಗಳ ಒತ್ತಡಗಳು ಕಾಡುತ್ತಿರುತ್ತವೆ. ಮನೆಯಲ್ಲಿ ಕೆಲಸ ಮಾಡುವಾಗ, ಕಚೇರಿಗೆ ಹೋಗುವಾಗ ಮತ್ತು ರಾತ್ರಿ ಹೊತ್ತಿನಲ್ಲಿ ನಿರಾತಂಕವಾಗಿ ಹಾಸಿಗೆಯ ಮೇಲೆ ಕಾಲ ಕಳೆಯುವ ಸಂದರ್ಭದಲ್ಲಿಯೂ ಆತಂಕ ನಮ್ಮನ್ನು ಅಮರಿಕೊಂಡಿರುತ್ತದೆ.

ಇದು ಪುರುಷರಿಗೆ ಮಾತ್ರವಲ್ಲ ಮಹಿಳೆಯರಿಗೂ ಅನ್ವಯವಾಗುತ್ತದೆ. ಆದರೆ, ಸಂಗಾತಿಯೊಡನೆ ಮನಸೋ ಇಚ್ಛೆ ಲೈಂಗಿಕ ಕ್ರೀಡೆಯಲ್ಲಿ ತೊಡಗುವುದು ಈ ಎಲ್ಲ ಒತ್ತಡ, ಆತಂಕ, ಭಯಗಳನ್ನು ನಿವಾರಿಸುವ ರಾಮಬಾಣವಾಗಿದೆ. ಹಾಗೆಯೆ, ಹಾಸಿಗೆಯಲ್ಲಿ ಗಂಡನಿಗೆ ಸುಖ ನೀಡುತ್ತೇನೋ ಇಲ್ಲವೋ ಎಂಬ ಆತಂಕ ಕೂಡ ದೈನಂದಿನ ಜೀವನದ ಮೇಲೆ ದುಷ್ಪರಿಣಾಮ ಬೀರಬಲ್ಲದು.

ತನ್ನ ದೇಹ ಅಂದವಾಗಿದೆಯೇ ಇಲ್ಲವೆ ಎಂಬ ದುಗುಡ, ಸೂಕ್ತ ಸಮಯದಲ್ಲಿ ಸ್ಖಲನವಾಗುವುದೋ ಇಲ್ಲವೋ ಎಂಬ ಅವಿಶ್ವಾಸ ಮಹಿಳೆಯ ರಾತ್ರಿಯ ಸುಮಧುರ ಸಮಯವನ್ನು ಹಾಳುಗೆಡವಬಲ್ಲವು. ಹಾಸಿಗೆ ಸಂತೋಷವನ್ನು ಕಾಡುವ ಆತಂಕಗಳೇ ಹಾಳುಗೆಡವುತ್ತವೆ ಎಂಬುದು ಮನದಟ್ಟಾದರೆ ಲೈಂಗಿಕ ಅಭದ್ರತೆ ನಿವಾರಿಸಲು ಕೆಲ ಕ್ರಮಗಳನ್ನು ತೆಗೆದುಕೊಳ್ಳುವುದು ಮಹಿಳೆಯರಿಗೆ ಒಳಿತು.

 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ